Urdu   /   English   /   Nawayathi

ನೀರು ನಿಂತು ಅವಾಂತರ

share with us

ಭಟ್ಕಳ: 23 ಜುಲೈ 2019 (ಫಿಕ್ರೋಖಬರ್ ಸುದ್ದಿ) ತಾಲೂಕಿನಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ಹೆದ್ದಾರಿ ಬದಿಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ಭಟ್ಕಳ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿ ಇತರ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಚರಂಡಿ ನಿರ್ವಣದ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಚರಂಡಿ ನಿರ್ವಿುಸುವಂತೆ ಸ್ಥಳೀಯರು ಅಧಿಕಾರಿಗಳಿಗೆ ವಿನಂತಿಸಿದ್ದರು. ಅಲ್ಲದೆ, ಮಳೆಗಾಲದ ಪೂರ್ವದಲ್ಲಿ ಚರಂಡಿಯ ಕುರಿತು ಪುರಸಭೆಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳ ಬೇಜವಾಬ್ದಾರಿ ವತಿಯಿಂದ ಮಳೆ ನೀರು ಮನೆಗೆ ನುಗ್ಗುವಂತಾಗಿದೆ. ಹೆದ್ದಾರಿ ವಿಸ್ತರಣೆ ವೇಳೆ ಹಳೆಯ ಕಟ್ಟಡ ನೆಲಸಮಗೊಳಿಸಿದಾಗ ಚರಂಡಿ ಬ್ಲಾಕ್ ಆಗಿದೆ. ನೂತನ ಕಟ್ಟಡದ ಕಾಮಗಾರಿ ನಡೆಯುತ್ತಿರುವಾಗ ಚರಂಡಿ ಮುಚ್ಚಲ್ಪಟ್ಟಿದ್ದರಿಂದ ಸಮಸ್ಯೆ ಉದ್ಭವಿಸಿದೆ ಎಂದು ಸ್ಥಳಕ್ಕೆ ಬಂದ ಅಧಿಕಾರಿಗಳ ಬಳಿ ತಮ್ಮ ಅಸಮಾಧಾನ ತೋಡಿಕೊಂಡರು. ಸ್ಥಳಕ್ಕೆ ಐಆರ್​ಬಿ ಕಂಪನಿ ಅಧಿಕಾರಿಯನ್ನು ತಕ್ಷಣ ಕರೆಸಿ ನೀರು ಹರಿಸುವಿಕೆಗೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಐಆರ್​ಬಿ ಸಂಸ್ಥೆಯ ಜೆಸಿಬಿ ತರಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಯಿತು. ಅಲ್ಲದೆ, ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಜೆಸಿಬಿಯನ್ನು ಇಲ್ಲಿಯೇ ಇಡುವಂತೆ ಐಆರ್​ಬಿ ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾ ಸೂಚನೆ ನೀಡಿದ್ದಾರೆ. ಐಆರ್​ಬಿ ಇಂಜಿನಿಯರ್ ಮಲ್ಲಿಕಾರ್ಜುನ, ಪುರಸಭೆ ಸದಸ್ಯ ಮೋಹನ ನಾಯ್ಕ, ರಾಘವೇಂದ್ರ ದೇವಾಡಿಗ ಹಾಗೂ ಮಣ್ಕುಳಿ, ಮಾರುತಿ ನಗರ ಭಾಗದ ನೂರಾರು ಗ್ರಾಮಸ್ಥರು ಇದ್ದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا