Urdu   /   English   /   Nawayathi

ನೆಹರೂ ಜೈವಿಕ ಉದ್ಯಾನ | ಬಹು ಅಂಗಾಂಗ ವೈಫಲ್ಯದಿಂದ ಸಿಂಹ ಸಾವು

share with us

ಹೈದರಾಬಾದ್: 21 ಜುಲೈ 2019 (ಫಿಕ್ರೋಖಬರ್ ಸುದ್ದಿ) ಇಲ್ಲಿನ ನೆಹರೂ ಜೈವಿಕ ಉದ್ಯಾನದಲ್ಲಿ ಸಿಂಹವೊಂದು ಬಹು ಅಂಗಾಂಗ ವೈಫಲ್ಯದಿಂದ ಶನಿವಾರ ಮೃತಪಟ್ಟಿದೆ. ‘ಜೀತು’ ಹೆಸರಿನಿಂದ ಕರೆಯಲ್ಪಡುತ್ತಿದ್ದ ಐದು ವರ್ಷ ವಯಸ್ಸಿನ ಈ ಸಿಂಹವು ಬೆನ್ನುಹುರಿಯ ಗಾಯಕ್ಕೊಳಗಾಗಿ, ಆ ಭಾಗದ ನರಗಳ ಸಂವೇದನಾಶೀಲತೆಯನ್ನು ಕಳೆದುಕೊಂಡಿತ್ತು. ಜತೆಗೆ, ಬಹು ಅಂಗಾಂಗ ವೈಫಲ್ಯದಿಂದಾಗಿ ಸಾವಿಗೀಡಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಸಂಬಂಧ ಸಿಂಹಕ್ಕೆ 12 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾಗಿ ಎಎನ್‌ಐ ಟ್ವೀಟ್‌ ಮಾಡಿದೆ.

ANI✔@ANI

Telangana: A 5-year-old Asiatic lion 'Jeetu' died due to multiple organs failure, in Nehru Zoological Park, Hyderabad yesterday. The lion was suffering from paraplegia and was being treated since last twelve days.

View image on TwitterView image on Twitter

107

6:49 AM - Jul 21, 2019

Twitter Ads info and privacy

20 people are talking about this

ಈ ಸಿಂಹವು ಏಷ್ಯಾ ಪ್ರಭೇದದ್ದಾಗಿದೆ. ಈ ಪ್ರಭೇದದ ಸಿಂಹಗಳು ಅಳಿವಿನಂಚಿನಲ್ಲಿದ್ದು, ಇವುಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಗುಜರಾತ್‌ನ ಗೀರ್‌ ರಾಷ್ಟ್ರೀಯ ಅರಣ್ಯ ವಲಯದಲ್ಲಿ ಈ ಸಿಂಹಗಳು ಇವೆ. ಏಷ್ಯಾ ಸಿಂಹದ ವೈಜ್ಞಾನಿಕ ಹೆಸರು ಪ್ಯಾಂಥೆರಾ ಲಿಯೋ ಪರ್ಸಿಕಾ. ಈ ಪ್ರಭೇದ ಅಳಿವಿನಂಚಿನಲ್ಲಿರುವ ವನ್ಯಪ್ರಾಣಿಗಳ ಪಟ್ಟಿಯಲ್ಲಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا