Urdu   /   English   /   Nawayathi

ವಿದ್ಯುತ್ ರಸೀದಿ​ ನೋಡಿದ ಮನೆ ಮಾಲೀಕನಿಗೆ ಶಾಕ್... ಬಂದ ಬಿಲ್​ ಎಷ್ಟು ಗೊತ್ತಾ?!

share with us

ಹಾಪುರ್(ಉತ್ತರ ಪ್ರದೇಶ): 21 ಜುಲೈ 2019 (ಫಿಕ್ರೋಖಬರ್ ಸುದ್ದಿ) ಹಾಪುರ್ ಜಿಲ್ಲೆಯ ಚಮ್ರಿ ಗ್ರಾಮದ ವೃದ್ದನೋರ್ವನಿಗೆ 128 ಕೋಟಿ ವಿದ್ಯುತ್​ ಬಿಲ್​ ನೀಡಿದ್ದರಿಂದ ಆತ ಕಂಗಾಲಾಗಿದ್ದಾನೆ.

ಮನೆಯಲ್ಲಿ ಕೇವಲ ಒಂದು ಫ್ಯಾನ್​ ಮತ್ತು ಬಲ್ಬ್​ ಬಿಟ್ಟರೆ ಬೇರೇ ಯಾವುದಕ್ಕೂ ನಾವು ಕರೆಂಟ್​ ಬಳಸುತ್ತಿಲ್ಲ. ಪ್ರತಿ ತಿಂಗಳು 700 ರಿಂದ 800 ರೂಪಾಯಿ ಬಿಲ್​ ಬರುತ್ತಿತ್ತು. ಆದರೆ ಈ ಬಾರಿ128,45,95,444 ರೂಪಾಯಿ ಬಿಲ್​ ನೀಡಿದ್ದಾರೆ. ಏಕೆ ಇಷ್ಟೊಂದು ಮೊತ್ತದ ಬಿಲ್​ ಬಂದಿದೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದ್ದ ವಿದ್ಯುತ್​ ಸಂಪರ್ಕವನ್ನೂ ಕಡಿತಗೊಳಿಸಿದ್ದಾರೆ. ಈ ಬಗ್ಗೆ ವಿದ್ಯುತ್​ ಕಚೇರಿಗೆ ಹೋಗಿ ಕೇಳಿದ್ದಕ್ಕೆ, ನಮಗೆ ಅದೆಲ್ಲ ಗೊತ್ತಿಲ್ಲ. ನೀವು ಬಿಲ್​ ಪಾವತಿಸುವವರೆಗೂ ಸಂಪರ್ಕ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ನನಗೆ ನನ್ನ ಮನೆಯ ಬಿಲ್​ ಮಾತ್ರ ನೀಡಿದ್ದಾರೋ ಅಥವಾ ಇಡೀ ಊರಿನ ಬಿಲ್​ ನೀಡಿದ್ದಾರೋ ಗೊತ್ತಾಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ ವೃದ್ಧ. ಘಟನೆ ಕುರಿತು ಪ್ರತಿಕ್ರಿಯಿಸಿರುವ ವಿದ್ಯುತ್​ ಇಲಾಖೆ ಇಂಜಿನಿಯರ್ ರಾಮ್​ ಶರ್ಮಾ, ಯಾವುದೋ ತಾಂತ್ರಿಕ ಕಾರಣದಿಂದಾಗಿ ಇಷ್ಟೊಂದು ಮೊತ್ತದ ಬಿಲ್​ ಬಂದಿದೆ. ಈ ಬಗ್ಗೆ ಮಾಲೀಕರು ಬಿಲ್​ ಸಮೇತ ದೂರು ನೀಡಿದ್ರೆ ಸರಿಪಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا