Latest News:
ಜನವಿರೋಧಿ ನೀತಿ ವಿರೋಧಿಸದಿರುವುದು ದೇಶದ್ರೋಹ.. ನಿವೃತ್ತ ಐಎಎಸ್ ಕಣ್ಣನ್ ಗೋಪಿನಾಥ್ ಮಂಗಳೂರಿನಿಂದ ಹೈದರಾಬಾದ್ಗೆ ಅಂಬಾರಿ ಡ್ರೀಮ್ ಕ್ಲಾಸ್ ಬಸ್ ಸೇವೆ ಆರಂಭ ಬ್ಯಾರಿ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 6 ಕೋಟಿ ಅನುದಾನ: ರಹೀಂ ಉಚ್ಚಿಲ್ ಈರುಳ್ಳಿಯನ್ನು ಬೇಕಾಬಿಟ್ಟಿ ದಾಸ್ತಾನು ಮಾಡುವಂತಿಲ್ಲ.. ಡಿಸಿ ಆದೇಶ ಪರೀಕ್ಷೆಯಲ್ಲಿ ಕಡಿಮೆ ಅಂಕ: ವಿದ್ಯಾರ್ಥಿನಿ ಮುಖಕ್ಕೆ ಕಪ್ಪು ಬಣ್ಣ ಬಳಿದು ಶಾಲೆ ಆವರಣದಲ್ಲಿ ಓಡಿಸಿದ ಶಿಕ್ಷಕಿ! ಮೂರು ವರ್ಷಗಳಿಂದ ಶೌಚಾಲಯದಲ್ಲೇ ವಾಸಿಸುತ್ತಿದ್ದಾರೆ ಈ ತಾಯಿ... ಕಾರಣ ? 2018ರ ಘನಘೋರ ರೈಲು ದುರಂತ: ನ್ಯಾಯಕ್ಕಾಗಿ ಸಂತ್ರಸ್ತರ ಕುಟುಂಬಗಳ ಅಳಲು ಪೌರತ್ವ ತಿದ್ದುಪಡಿ ಮಸೂದೆಗೆ ಭಾರಿ ವಿರೋಧ, ಅಸ್ಸೋಂನಲ್ಲಿ ಭುಗಿಲೆದ್ದ ಆಕ್ರೋಶ

ಬೆಂಗಳೂರು: 18 ಜುಲೈ 2019 (ಫಿಕ್ರೋಖಬರ್ ಸುದ್ದಿ) ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆ ರಾಜಭವನದಲ್ಲಿ ಇಂದು ಬಿಜೆಪಿ ದೂರು ನೀಡಿದೆ. ಇದರ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿಶೇಷಾಧಿಕಾರಿ ಇಂದು ಸದನದಲ್ಲಿ ಹಾಜರಿದ್ದು ರಾಜ್ಯಪಾಲರ ಸಂದೇಶ ಹೊತ್ತು ತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಡಲೇ ತಡಮಾಡದೆ ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ರಾಜ್ಯಪಾಲರು ಸ್ಪೀಕರ್ ಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ಬೆಳಿಗ್ಗೆಯಿಂದ ಏನಾನಾಯ್ತು..? :ವಿಶ್ವಾಸಮತ ಯಾಚನೆಯ ಉದ್ದೇಶಕ್ಕಾಗಿ ನಡೆದ ವಿಧಾನಸಭೆಯ ಕಲಾಪದಲ್ಲಿ ಸುಪ್ರೀಂಕೋರ್ಟ್ನ ಆದೇಶ ವಿಪ್ ಸಂಬಂಧಪಟ್ಟಂತಹ ಕಾನೂನಾತ್ಮಕ ಅಂಶಗಳ ಮೇಲೆಯೇ ಮಧ್ಯಾಹ್ನದವರೆಗೂ ಚರ್ಚೆ ನಡೆಯಿತು. ಇಂದು ಬೆಳಗ್ಗೆ 11.15ಕ್ಕೆ ವಿಧಾನಸಭೆಯ ಕಲಾಪ ಆರಂಭಗೊಂಡಿತು. ಸಭಾಧ್ಯಕ್ಷ ರಮೇಶ್ಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ವಿಶ್ವಾಸಮತ ಯಾಚನೆಗೆ ಅವಕಾಶ ಮಾಡಿಕೊಟ್ಟರು. ಕುಮಾರಸ್ವಾಮಿ ಸವಿವರವಾದ ಭಾಷಣ ಆರಂಭಿಸಿ ಮಧ್ಯಭಾಗದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಸ್ತಾಪ ಮಾಡಿದರು. ಆಗ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸದನಕ್ಕೆ ಗೈರು ಹಾಜರಾಗಿರುವ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದೋಸ್ತಿ ಪಕ್ಷದ 15 ಮಂದಿ ಶಾಸಕರಿಗೆ ವಿಪ್ ನೀಡುವಂತಿಲ್ಲ. 15 ಶಾಸಕರನ್ನು ಸದನದಲ್ಲಿ ಭಾಗವಹಿಸುವಂತೆ ಒತ್ತಾಯಿಸುವಂತಿಲ್ಲ ಎಂದು ತೀರ್ಪು ನೀಡಲಾಗಿದೆ. ಈ ಆದೇಶದಿಂದ ಶಾಸಕಾಂಗ ಪಕ್ಷದ ನಾಯಕನಾದ ನನ್ನ ಹಕ್ಕುಚ್ಯುತಿಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು,. ಅಲ್ಲಿಂದ ಆರಂಭವಾದ ಚರ್ಚೆ ಮಧ್ಯಾಹ್ನ 1.45ರವರೆಗೂ ಮುಂದುವರೆದಿತ್ತು. ಸಿದ್ದರಾಮಯ್ಯ ಅವರು ಕ್ರಿಯಾಲೋಪ (ಪಾಯಿಂಟ್ ಆಫ್ ಆರ್ಡರ್) ನಿಯಮಾವಳಿ 351ರಡಿ ವಿಷಯ ಪ್ರಸ್ತಾಪಿಸಿದರು. ಹಿರಿಯ ಶಾಸಕ ಎಚ್.ಕೆ.ಪಾಟೀಲ್, ಸಚಿವ ಕೃಷ್ಣಭೈರೇಗೌಡ ಅವರು ಸಿದ್ದರಾಮಯ್ಯ ಅವರ ಪಾಯಿಂಟ್ ಆಫ್ ಆರ್ಡರ್ ಮತ್ತಷ್ಟು ವಿಸ್ತರಿಸಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ಪಾಳಯದಿಂದ ಜೆ.ಸಿ.ಮಾಧುಸ್ವಾಮಿ, ಜಗದೀಶ್ಶೆಟ್ಟರ್, ಬಸವರಾಜ್ ಬೊಮ್ಮಾಯಿ ಮತ್ತಿತರರು ವಿರೋಧ ವ್ಯಕ್ತಪಡಿಸಿದರು. ವಿಶ್ವಾಸಮತಯಾಚನೆಯ ಮೂಲ ಉದ್ದೇಶದಿಂದ ಕಲಾಪ ನಡೆಯುತ್ತಿದೆ. ಇಲ್ಲಿ ಪಾಯಿಂಟ್ ಆಫ್ ಆರ್ಡರ್ ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ನ ತೀರ್ಪು, ವಿಪ್ ಉಲ್ಲಂಘನೆಯ ವಿಷಯಗಳನ್ನು ಚರ್ಚೆ ಮಾಡಲು ಸಾಧ್ಯವಿಲ್ಲ. ಪಾಯಿಂಟ್ ಆಫ್ ಆರ್ಡರ್ಗೆ ಅವಕಾಶವೇ ಇಲ್ಲ ಎಂದು ವಾದಿಸಿದರು. ಮಧ್ಯಾಹ್ನ 1.45ರವರೆಗೂ ಪಾಯಿಂಟ್ಆಫ್ ಆರ್ಡರ್ನ ಮೇಲೆ ಚರ್ಚೆ ಬೇಕೋ ಬೇಡವೋ ಎಂಬ ವಿಷಯದ ಮೇಲೆ ವಾದ-ವಿವಾದವೇ ನಡೆಯಿತು. ಆಡಳಿತ ಪಕ್ಷದ ಶಾಸಕರು ಬಿಜೆಪಿ ನಾಯಕರ ಹೇಳಿಕೆಗಳಿಗೆ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಿದ್ದರು. ಆದರೆ ವಿರೋಧಪಕ್ಷದ ಭಾಗದಿಂದ ಅತ್ಯಂತ ತಾಳ್ಮೆಯಿಂದ ಉತ್ತರಗಳು ಬರುತ್ತಿದ್ದವು.
ಈ, ಸಂ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |