Urdu   /   English   /   Nawayathi

ಕೊನೆಗೂ ಭಾರತಕ್ಕೆ ವಾಯುಗಡಿ ತೆರೆದ ಪಾಕಿಸ್ತಾನ, ವಿಮಾನ ಸಂಚಾರ ಪುನಾರಂಭ!

share with us

ಪಾಕಿಸ್ತಾನ: 16 ಜುಲೈ 2019 (ಫಿಕ್ರೋಖಬರ್ ಸುದ್ದಿ) ಬಾಲಕೋಟ್ ಏರ್ ಸ್ಟ್ರೈಕ್ ಬಳಿಕ ಭಾರತಕ್ಕೆ ನಿರ್ಬಂಧಿಸಲಾಗಿದ್ದ ಪಾಕಿಸ್ತಾನ ವೈಮಾನಿಕ ವಲಯ ಬಳಕೆಯನ್ನು ಮತ್ತೆ ಪುನಾರಂಭ ಮಾಡಲಾಗಿದ್ದು, ಇಂದು ಬೆಳಗ್ಗೆಯಿಂದಲೇ ಮತ್ತೆ ವಿಮಾಗಳ ಸಂಚಾರ ಪುನರಾರಂಭಗೊಂಡಿದೆ. ಈ ಹಿಂದೆ ಏರ್ ಸ್ಟ್ರೈಕ್ ಬಳಿಕ ಪಾಕಿಸ್ತಾನದ ಮೇಲೆ ಭಾರತ ಇನ್ನಷ್ಟು ವೈಮಾನಿಕ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನುವ ಆತಂಕದಿಂದಾಗಿ ಪಾಕಿಸ್ತಾನ ಸರ್ಕಾರವು ತನ್ನ ಏರೋಸ್ಪೇಸ್ ಬಳಕೆಯನ್ನು ಭಾರತಕ್ಕೆ ನಿರ್ಬಂಧಿಸಿತ್ತು. ಇದರಿಂದ ಪಾಕಿಸ್ತಾನ ಹಾಗೂ ಇತರೆ ದೇಶಗಳ ನಾಗರಿಕ ವಿಮಾನಯಾನ ಹಾರಾಟ ಕೂಡ ಪಾಕಿಸ್ತಾನದ ಏರೋಸ್ಪೇಸ್ ನಲ್ಲಿ ರದ್ದಾಗಿತ್ತು. ಹೀಗಾಗಿಗ ಪಾಕಿಸ್ತಾನ ತನ್ನ ವಾಯುಗಡಿ ತೆರೆಯುವಂತೆ ಅಂತಾರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಒತ್ತಡ ಕೇಳಿ ಬಂದಿತ್ತು. ಭಾರತೀಯ ವಾಯು ಸೇನೆಯ ವಾಯುದಾಳಿ ನಡೆದ ನಾಲ್ಕು ತಿಂಗಳ ಬಳಿಕ ಇದೀಗ ಪಾಕಿಸ್ತಾನ ಕೊನೆಗೂ ನಾಗರಿಕ ವಿಮಾನ ಸೇವೆಗೆ ತನ್ನ ವಾಯುಗಡಿಯನ್ನು ತೆರೆದಿದೆ. 

View image on Twitter

ANI✔@ANI

Govt sources:Consequent to Pak issuing NOTAM to lift airspace restrictions, relevant authorities have informed that India has also issued revised NOTAM immediately thereafter.With this,normal air traffic operations have resumed through all Flight Information Regions b/w India&Pak

69

8:50 AM - Jul 16, 2019

31 people are talking about this

Twitter Ads info and privacy

ಅದರಂತೆ ವಿದೇಶಿ ವಿಮಾನಗಳು ಮಾತ್ರವಲ್ಲದೇ ಭಾರತೀಯ ವಿಮಾನಗಳು ಕೂಡ ಈಗ ಪಾಕಿಸ್ತಾನದ ಏರೋಸ್ಪೇಸ್‌ ನಲ್ಲಿ ಹಾರಾಡಬಹುದಾಗಿದೆ. ಕಳೆದ ತಿಂಗಳು ಕಿರ್ಗಿಸ್ತಾನದಲ್ಲಿ ನಡೆದ ಶಾಂಘೈ ಸರ್ಕಾರ ಒಕ್ಕೂಟ ಸಭೆಯಲ್ಲಿ ಭಾಗವಹಿಸಲು ಮೋದಿ ತೆರಳುವಾಗ ಪಾಕಿಸ್ತಾನ ಬದಲಿಗೆ ಬೇರೆ ಮಾರ್ಗವನ್ನು ಬಳಸಿದ್ದರು. ಭಾರತ ಮನವಿ ಸಲ್ಲಿಸಿದರೆ ಪ್ರಧಾನಿ ಮೋದಿ ವಿಮಾನ ಹಾರಾಟಕ್ಕೆ ಅವಕಾಶ ಮಾಡಿಕೊಡುವುದಾಗಿ ಪಾಕಿಸ್ತಾನ ಹೇಳಿತ್ತು. ಆದರೆ ಭಾರತ ಯಾವುದೇ ಮನವಿ ಸಲ್ಲಿಸಿರಲಿಲ್ಲ. ಇದೇ ರೀತಿ ಭಾರತವು ಪಾಕಿಸ್ತಾನದ ವೈಮಾನಿಕ ಹಾರಾಟದ ಮೇಲೆ ಹೇರಿದ್ದ ನಿರ್ಬಂಧವನ್ನು ಮೇ 31ರಂದು ತೆರವುಗೊಳಿಸಿತ್ತು. ಈ ನಿರ್ಬಂಧದಿಂದ ಭಾರತಕ್ಕೆ ಜುಲೈ 2ರವರೆಗೆ 491 ಕೋಟಿ ರೂ ನಷ್ಟ ಉಂಟಾಗಿತ್ತು. ಸ್ಪೈಸ್ ಜೆಟ್, ಇಂಡಿಗೋ, ಗೋ ಏರ್‌ ಗೆ 30.73 ಕೋಟಿ , 25.1 ಕೋಟಿ, 2.1ಕೋಟಿ ರೂ ನಷ್ಟವಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ವಾಯುಗಡಿ ತೆರೆದ ಪಾಕಿಸ್ತಾನದ ಕ್ರಮಕ್ಕೆ ಆಫ್ಘಾನಿಸ್ತಾನ ಬೆಂಬಲ ನೀಡಿದ್ದು, ಪಾಕಿಸ್ತಾನದ ನಡೆ ಸ್ವಾಗತರ್ಹ ಎಂದು ಹೇಳಿದೆ.

View image on Twitter

Tahir Qadiry طاهر قادرى✔@tahirqadiry

AFG Civil Aviation Authority welcomes Pakistan’s move 2 re-open its airspace. AFG has suffered millions of  loss in revenue pertaining to closure of Pakistan's airspace since Feb. ”all Kabul flights to Delhi/Mumbai will now take place from the eastern routes” the statement says

24

8:39 AM - Jul 16, 2019

16 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا