Urdu   /   English   /   Nawayathi

ಬಿಟ್‌ಕಾಯಿನ್‌ಗೇ 300 ಕೋಟಿ ಮೋಸ!

share with us

ಟೋಕಿಯೋ: 15 ಜುಲೈ 2019 (ಫಿಕ್ರೋಖಬರ್ ಸುದ್ದಿ) ಜಪಾನ್‌ನಲ್ಲಿ ನೋಂದಾಯಿತ ಬಿಟ್‌ಕಾಯಿನ್‌ ಎಕ್ಸ್‌ಚೇಂಜ್‌ ಬಿಟ್‌ಪಾಯಿಂಟ್‌ ಹ್ಯಾಕರ್‌ಗಳ ಕೈಗೆ ಸಿಕ್ಕಿಕೊಂಡು 300 ಕೋಟಿ ರೂ. ನಷ್ಟ ಮಾಡಿಕೊಂಡಿದೆ. ಇದರಿಂದಾಗಿ ಬಿಟ್‌ಕಾಯಿನ್‌ನ ಎಲ್ಲ ವಹಿವಾಟು, ಸಂಗ್ರಹ ಹಾಗೂ ಹಿಂಪಡೆತಗಳನ್ನು ಕಂಪೆನಿ ಸ್ಥಗಿತಗೊಳಿಸಿದೆ. ಶುಕ್ರವಾರ ಈ ಘಟನೆ ನಡೆದಿದ್ದು, ಅಸಹಜ ಹಿಂಪಡೆತ ಗಮನಕ್ಕೆ ಬರುತ್ತಿದ್ದಂತೆಯೇ ಕ್ರಮ ಕೈಗೊಂಡಿದೆ. ಆದರೆ ಯಾವ ರೀತಿಯ ಕಳ್ಳತನ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಇದು ಕ್ರಿಪ್ಟೋಕರೆನ್ಸಿಗಳ ವಿನಿಮಯ ಕೇಂದ್ರವಾಗಿದ್ದು, ಬಿಟ್‌ಕಾಯಿನ್‌. ಬಿಟ್‌ಕಾಯಿನ್‌ ಕ್ಯಾಶ್‌, ಎಥರ್‌, ಲೈಟ್‌ಕಾಯಿನ್‌ ಮತ್ತು ಎಕ್ಸ್‌ಆರ್‌ಪಿ ವಹಿವಾಟು ನಡೆಸುತ್ತಿತ್ತು. ಈ ಹಿಂದೆ 2018 ರಲ್ಲೂ ಜೈಫ್ ಎಂಬ ಕ್ರಿಪ್ಟೋಕರೆನ್ಸಿ ಎಕ್ಸ್‌ ಚೇಂಜ್‌ ಇದೇ ರೀತಿಯ ಹ್ಯಾಕರ್‌ಗಳಿಂದಾಗಿ 600 ಕೋಟಿ ರೂ. ಕಳೆದುಕೊಂಡಿತ್ತು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا