Urdu   /   English   /   Nawayathi

ಕೈ ನಾಯಕರ ಯತ್ನ ವಿಫಲ; ಮುಂಬೈಗೆ ಹಾರಿದ್ರಾ ರೆಬೆಲ್​ ಸುಧಾಕರ್​?

share with us

ಬೆಂಗಳೂರು: 13 ಜುಲೈ 2019 (ಫಿಕ್ರೋಖಬರ್ ಸುದ್ದಿ) ರಾಜೀನಾಮೆ ಸಲ್ಲಿಸಿರುವ ಅತೃಪ್ತ ಕಾಂಗ್ರೆಸ್ ಶಾಸಕ ಡಾ. ಕೆ ಸುಧಾಕರ್ ಮನವೊಲಿಸಿ ಕರೆತರಲು ತೆರಳಿದ್ದ ನಾಯಕರು ಬರಿಗೈಲಿ ವಾಪಸ್ಸಾಗಿದ್ದಾರೆ. ಬೆಳಗ್ಗಿನಿಂದ ಎಂಟಿವಿ ನಾಗರಾಜ್ ಅವರನ್ನು ಮನವೊಲಿಸುವಲ್ಲಿ ಒಂದು ಹಂತಕ್ಕೆ ಯಶಸ್ಸು ಕಂಡಿರುವ ರಾಜ್ಯ ಕಾಂಗ್ರೆಸ್ ನಾಯಕರು ಇವರ ಜೊತೆ ಸುಧಾಕರ್ ಅವರ ಮನವೊಲಿಸುವ ಯತ್ನದಲ್ಲಿ ವಿಫಲರಾಗಿದ್ದಾರೆ. ಬೆಳಗ್ಗಿನಿಂದಲೂ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳದಲ್ಲಿ ಇದ್ದ ಸುಧಾಕರ್ ಕೊನೆಗೂ ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯ ಲೀಲಾ ಪ್ಯಾಲೇಸ್ ಹೋಟೆಲ್​​ನಲ್ಲಿ ಇದ್ದಾರೆ ಎಂಬ ಮಾಹಿತಿ ಪಡೆದು ಎಂಟಿಬಿ ನಾಗರಾಜ್ ಅವರೊಂದಿಗೆ ಸಚಿವ ಜಮೀರ್ ಅಹಮದ್ ಖಾನ್ ತೆರಳಿದ್ದರು. ಆದರೆ ಇವರು ಬರುವ ಹೊತ್ತಿಗೆ ಎಲ್ಲ ಅಲ್ಲಿಂದ ಹೊರಟಿದ್ದು ಸುಧಾಕರ್ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಬೆಳಗ್ಗಿನಿಂದ ಎಂಟಿಬಿ ನಾಗರಾಜ್ ನಿವಾಸದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಡಿಸಿಎಂ ಡಾ. ಜಿ. ಪರಮೇಶ್ವರ್ ಮತ್ತಿತರರು 4-5 ಗಂಟೆ ಮನವೊಲಿಸಿದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಕರೆದುಕೊಂಡು ಬಂದರು. ಇಲ್ಲಿ ಮತ್ತೆ 4 ಗಂಟೆ ಸುದೀರ್ಘ ಚರ್ಚೆ ನಡೆಸಿದ ನಂತರ ಒಂದು ಹಂತಕ್ಕೆ ನಾಗರಾಜ್ ಮನವೊಲಿಸಿದ್ದಾರೆ ಎಂಬ ತೀರ್ಮಾನಕ್ಕೆ ಬಂದರು. ಈ ಸಂದರ್ಭ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಂಡಿಷನ್ ಹಾಕಿದ ಎಂಟಿಬಿ ತಮ್ಮೊಂದಿಗೆ ರಾಜೀನಾಮೆ ನೀಡಿರುವ ಡಾ. ಕೆ. ಸುಧಾಕರ್ ಕೂಡ ರಾಜೀನಾಮೆ ವಾಪಸ್ ಪಡೆಯಲು ಒಪ್ಪಿದರೆ ತಾವಿಬ್ಬರೂ ಒಟ್ಟಿಗೆ ವಾಪಸ್ ಪಡೆಯುವುದಾಗಿ ತಿಳಿಸಿದರು. ಕೂಡಲೇ ಇವರ ಮೂಲಕವೇ ಸುಧಾಕರ್ ಅವರನ್ನು ಸಂಪರ್ಕಿಸಿದ ಕಾಂಗ್ರೆಸ್ ನಾಯಕರು ಅವರನ್ನು ಕಾವೇರಿಗೆ ಕರೆತರಲು ತೆರಳಿದರು. ಆದರೆ ಇವರ ಕೈಗೆ ಸಿಗದ ಸುಧಾಕರ್ ಮುಂಬೈಯತ್ತ ಪ್ರಯಾಣ ಬೆಳೆಸಿದ್ದಾರೆ ಮಾಹಿತಿ ಲಭಿಸಿದೆ. ಬರಿಗೈಲಿ ವಾಪಸ್ಸಾದ ಎಂಟಿಬಿ ನಾಗರಾಜ್ ಅವರನ್ನು ಹೇಗಾದರೂ ಉಳಿಸಿಕೊಳ್ಳುವ ಯತ್ನದಲ್ಲಿರುವ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಇವರೊಂದಿಗೆ ಬೆಂಗಳೂರಿನ ಯಶವಂತಪುರದ ತಾಜ್ ವಿವಾಂತ ಹೋಟೆಲ್​ಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಹೇಗಾದರೂ ತಮ್ಮ ಶಾಸಕರೊಂದಿಗೆ ಅವರನ್ನು ಉಳಿಸಿಕೊಳ್ಳುವ ಯತ್ನ ಕಾಂಗ್ರೆಸ್ಸಿಗರದ್ದಾಗಿದ್ದು ಎಷ್ಟರಮಟ್ಟಿಗೆ ಸಫಲತೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا