Urdu   /   English   /   Nawayathi

ಗನ್ ಹಿಡಿದು ಡ್ಯಾನ್ಸ್ ಮಾಡಿದ್ದ ಶಾಸಕನನ್ನು ಉಚ್ಛಾಟಿಸಿದ ಬಿಜೆಪಿ

share with us

ಡೆಹ್ರಾಡೂನ್: 13 ಜುಲೈ 2019 (ಫಿಕ್ರೋಖಬರ್ ಸುದ್ದಿ) ತನ್ನ ಜನ್ಮದಿನದಂದು ಎರಡು ಕೈಯಲ್ಲಿ ಗನ್‍ಗಳನ್ನು ಹಿಡಿದು ಡ್ಯಾನ್ಸ್ ಮಾಡುವ ಮೂಲಕ ಮತ್ತೆ ವಿವಾದಕ್ಕಿಡಾಗಿದ್ದ ಉತ್ತರಾಖಂಡ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಚಾಂಪಿಯನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಬಿಜೆಪಿ ಶಾಸಕ ಪ್ರಣವ್ ತನ್ನ ಎರಡು ಕೈಯಲ್ಲಿ ಗನ್‍ಗಳನ್ನು ಹಿಡಿದುಕೊಂಡು, ಅಶ್ಲೀಲ ಪದಗಳನ್ನು ಬಳಸಿ ಬೈಯುತ್ತ, ಬಾಲಿವುಡ್‍ನ ಐಟಮ್ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಶಾಸಕನ ವಿಲಕ್ಷಣ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ವರಿಷ್ಠರು ಶಾಸಕನನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಮೂಲಕ ಕಠಿಣ ಕ್ರಮ ಕೈಗೊಂಡಿದ್ದಾರೆ. ಪ್ರಣವ್ ಸಿಂಗ್ ಕಪ್ಪು ಬಣ್ಣದ ಬನಿಯನ್ ಹಾಗೂ ಬಿಳಿ ಪ್ಯಾಂಟ್ ಧರಿಸಿ, ಎರಡೂ ಕೈಯ್ಯಲ್ಲಿ ನಾಲ್ಕು ಗನ್ ಹಿಡಿದುಕೊಂಡು, ಮೊಣಕಾಲ ಮೇಲೆ ಮದ್ಯಪಾನದ ಗ್ಲಾಸ್ ಇಟ್ಟುಕೊಂಡು, ಡ್ಯಾನ್ಸ್ ಮಾಡುತ್ತ ಫೋಸ್ ನೀಡಿದ್ದರು. ಶಾಸಕರ ಜೊತೆ ಸಹಚರರು ಸಹ ಡ್ಯಾನ್ಸ್ ಮಾಡಿದ್ದು, ಸುಮಾರು 1.45 ನಿಮಿಷಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಕ್ಷದ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಇವರ ವರ್ತನೆಗೆ ಛೀಮಾರಿ ಹಾಕಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا