Urdu   /   English   /   Nawayathi

ಸುಧಾಕರ ರಾಜೀನಾಮೆ: ವಿಧಾನಸೌಧದಲ್ಲಿ ಭಾರಿ ನಾಟಕ, ರಾಜಭವನಕ್ಕೆ ಕರೆದೊಯ್ದ ಪೊಲೀಸರು

share with us

ಬೆಂಗಳೂರು: 10 ಜುಲೈ 2019 (ಫಿಕ್ರೋಖಬರ್ ಸುದ್ದಿ) ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಧಾಕರ ಬುಧವಾರ ರಾಜೀನಾಮೆ ನೀಡಿದರು. ಸಭಾಧ್ಯಕ್ಷರ ಕೊಠಡಿಗೆ ಸ್ವಲಿಖಿತ ರಾಜೀನಾಮೆ ಪತ್ರ ಸಲ್ಲಿಸಲು ಮುಂದಾದ ಸಂದರ್ಭ ವಿಧಾನಸೌಧದಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ಸುಧಾಕರ ಅವರ ಮನವೊಲಿಸಲು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ಯತ್ನಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್‌ ನಾಯಕರ ನಿಲುವನ್ನು ಯಡಿಯೂರಪ್ಪ ಖಂಡಿಸಿದರು. ರಾಜೀನಾಮೆ ನೀಡಿರುವ ಶಾಸಕರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. 'ಸುಧಾಕರ ಕಾಂಗ್ರೆಸ್ ಶಾಸಕ. ಅವರು ರಾಜೀನಾಮೆ ನೀಡಿದ ವಿಷಯ ತಿಳಿದು ಅವರೊಂದಿಗೆ ಮಾತನಾಡಲು ಯತ್ನಿಸಿದೆ. ಆಗ ಬಿಜೆಪಿ ಗೂಂಡಾಗಿರಿ ನಡೆಸಿತು. ಸುಧಾಕರ್‌ಗೂ ಬಿಜೆಪಿಗೂ ಏನು ಸಂಬಂಧ?' ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. 'ಸುಧಾಕರ ಪಕ್ಷ ಬಿಡುವುದಿಲ್ಲ' ಎಂದೇ ಸಿದ್ದರಾಮಯ್ಯ ಕೊನೆಯವರೆಗೂ ಹೇಳುತ್ತಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಸುಧಾಕರ್‌ ಅವರನ್ನು ಕಾಂಗ್ರೆಸ್‌ ನಾಯಕರು ಮನವೊಲಿಕೆಗೆಂದು ವಿಧಾನಸೌಧದ ಮೂರನೇ ಮಹಡಿಯ ಜಾರ್ಜ್‌ ಅವರ ಕಚೇರಿಗೆ ಕರೆದೊಯ್ದರು. ಇದನ್ನು ತಿಳಿದು ವಿಧಾನಸೌಧದ ಬಳಿಗೆ ಬಂದ ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ರೇಣುಕಾಚಾರ್ಯ ದನಿ ಏರಿಸಿ ಕೂಗಾಡಿದರು. ವಿಧಾನಸಭೆ ಪ್ರವೇಶಿಸುತ್ತಿದ್ದ ಸಚಿವ ಯು.ಟಿ ಖಾದರ್‌ ಅವರು ರೇಣುಕಾಚಾರ್ಯ ಅವರ ಅ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಇದರಿಂದಾಗಿ ವಿಧಾನಸೌಧದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು. ಸುಧಾಕರ ಅವರ ಮನವೊಲಿಸುವ ಕಾಂಗ್ರೆಸ್‌ ನಾಯಕ ಯತ್ನವನ್ನುಬಿಜೆಪಿ ಆಕ್ಷೇಪಿಸಿತು. ಸುಧಾಕರ್ ಅವರನ್ನು 10 ನಿಮಿಷದೊಳಗೆ ಕರೆತರಬೇಕು ಎಂದು ರಾಜ್ಯಪಾಲರಿಂದ ಪೊಲೀಸ್ ಕಮಿಷನರ್‌ಗೆ ಸೂಚನೆ ರವಾನೆಯಾದ ಹಿನ್ನೆಲೆಯಲ್ಲಿ ಸಿನಿಮೀಯ ರೀತಿಯಲ್ಲಿ ಪೊಲೀಸ್ ವಾಹನಗಳೊಂದಿಗೆ ವಿಧಾನಸೌಧಕ್ಕೆ ಧಾವಿಸಿದ ಕಮಿಷನರ್ ಸುಧಾಕರ ಅವರನ್ನು ರಾಜಭವನಕ್ಕೆ ಕರೆದೊಯ್ದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا