Urdu   /   English   /   Nawayathi

ಅತೃಪ್ತ ಶಾಸಕರ ಭೇಟಿಗೆ ತೆರಳಿದ್ದ ಟ್ರಬಲ್ ಶೂಟರ್​... ಡಿಕೆಶಿ ಮುಂಬೈ ಪೋಲಿಸರ ವಶಕ್ಕೆ!

share with us

ಮುಂಬೈ: 10 ಜುಲೈ 2019 (ಫಿಕ್ರೋಖಬರ್ ಸುದ್ದಿ) ಮುಂಬೈನಲ್ಲಿ ತಂಗಿದ್ದ ಅತೃಪ್ತ ಶಾಸಕರನ್ನು ಮನವೊಲಿಸಿ ಬೆಂಗಳೂರಿಗೆ ಕರೆತರಲು ತೆರಳಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರನ್ನು ಮುಂಬಯಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬೈನ ರಿನೈಸೆನ್ಸ್​​​​​ ಹೋಟೆಲ್​ ಎದುರುಗಡೆ ಹೋಟೆಲ್​ ಒಳಗೆ ಬಿಡುವಂತೆ ಒತ್ತಾಯಿಸಿ ಕಾದು ಕುಳಿತಿದ್ದ ಸಚಿವ ಡಿ.ಕೆ. ಶಿವಕುಮಾರ್​ ಅವರನ್ನ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬೈ ಪೊಲೀಸರ ವರ್ತನೆಗೆ ಕಾಂಗ್ರೆಸ್​ ನಾಯಕರು ಅಸಮಾಧಾನಗೊಂಡಿದ್ದಾರೆ. ಬಿಜೆಪಿ ವಿರುದ್ಧ ಅವರೆಲ್ಲ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಳಗ್ಗೆಯಿಂದ ಹೋಟೆಲ್ ಗೇಟ್ ಬಳಿಯೇ ಶಾಕರ ಭೇಟಿಗೆ ಅವಕಾಶ ನೀಡಲು ಸ್ಥಳೀಯ ಪೊಲೀಸರಿಗೆ ಒತ್ತಾಯಿಸಿ ಹೋಟೆಲ್ ಹೊರಗೆ ಕುಳಿತಿದ್ದ ಸಚಿವ ಡಿಕೆ ಶಿವಕುಮಾರ್ ನನ್ನು ಆರು ಗಂಟೆಗಳ ಹೈಡ್ರಾಮಾ ಬಳಿಕ ಪೊಲಿಸರು ತಮ್ಮ ವಶಕ್ಕೆ ಪಡೆದರು. ಡಿಕೆ ಶಿವಕುಮಾರ್ ಅವರನ್ನು ನಾವು ಭೇಟಿ ಮಾಡಲು ಇಚ್ವಿಸುವುದಿಲ್. ಅವರು ಬೆಂಗಳೂರಿಗೆ ವಾಪಾಸಾಗಬೇಕೆಂದು ಶಾಸಕರಾದ ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜು ಇತರ ಶಾಸಕರು ಮನವಿ ಮಾಡಿದರು. ಆದರೆ ನಾನು ಶಾಸಕರ ಭೇಟಿ ಮಾಡದೇ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಹೋಟೆಲ್ ಗೇಟಿನ ಎದುರು ಕುಳಿತಾಗ ಹೆಚ್ಚಿನ ಜನರು ಗುಂಪುಗೂಡಿದರು. ಮುಂಬಯಿ ಪೊಲಿಸರು ಸಚಿವ ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ವಾತಾವರಣ ತಿಳಿಗೊಳಿಸಿದರು. ಸಚಿವ ಡಿಕೆ ಶಿವಕುಮಾರ್ ಜತೆ ತೆರಳಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ, ಶಾಸಕ ಕೆ.ಶಿವಲಿಂಗೇಗೌಡ ಅವರನ್ನು ಪೊಲಿಸರು ಬಿಟ್ಟು ಹೋಗಿದ್ದಾರೆ. ಸಚಿವ ಡಿಕೆಶಿ ಪೊಲಿಸರ ವಶವಾಗಿದ್ದರಿಂದ ಸಚಿವ ದೇವೇಗೌಡ ಮತ್ತು ಶಾಸಕ ಶಿವಲಿಂಗೇಗೌಡ ಅವರಿಗೆ ದಿಕ್ಕು ತೋಚದಂತಾಗಿದ್ದು ಈಗ ಡಿಕೆಶಿ ಬಿಡುಗಡೆಗೆ ಯತ್ನಿಸಬೇಕೊ ಅಥವಾ ಅತೃಪ್ತ ಶಾಸಕರ ಭೇಟಿಗೆ ಪ್ರಯತ್ನಿಸಬೇಕಾ ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا