Urdu   /   English   /   Nawayathi

ನದಿಯಲ್ಲಿ ಮುಳುಗಿದ ದೋಣಿ: 50 ಪ್ರಯಾಣಿಕರ ಗತಿ?

share with us

ಲಖೀಸರಾಯ್​ (ಬಿಹಾರ): 10 ಜುಲೈ 2019 (ಫಿಕ್ರೋಖಬರ್ ಸುದ್ದಿ) ಜನರು ಪ್ರಯಾಣಿಸುತ್ತಿದ್ದ ದೋಣಿ ನದಿಯಲ್ಲಿ ಮುಳುಗಿದ ಪರಿಣಾಮ ಹಲವರು ನಾಪತ್ತೆಯಾಗಿರುವ ಘಟನೆ ಬಿಹಾರದ ಲಖೀಸರಾಯ್​​​ನಲ್ಲಿ ಇಂದು ನಡೆದಿದೆ. ಇಲ್ಲಿನ ಕಿವೂಲ್ ನದಿಯಲ್ಲಿ 40 - 50 ಮಂದಿ ದೋಣಿಯಲ್ಲಿ ಸಾಗುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ನೀರಿನಲ್ಲಿ ಮುಳುಗಿದೆ. ಹಡಗಿನಲ್ಲಿದ್ದ ಅಷ್ಟೂ ಮಂದಿ ನದಿಯೊಳಗೆ ಬಿದ್ದಿದ್ದಾರೆ. ಅವಘಡ ಸಂಭವಿಸುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಜನರ ರಕ್ಷಣೆ ಧಾವಿಸಿದರು. ಸದ್ಯ ಎರಡು ಮೃತದೇಹಗಳು ಪತ್ತೆಯಾಗಿದ್ದು, ಮತ್ತೆ ಕೆಲವರು ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿದ್ದಾರೆ. ಎನ್​ಡಿಆರ್​ಎಫ್ ಹಾಗೂ ಎಸ್​ಡಿಆರ್​ಎಫ್​ಗಳು ಸೇರಿ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ರಕ್ಷಿಸಲ್ಪಟ್ಟ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿತ್ಯ ಇಲ್ಲಿನ ಜನರು ತರಕಾರಿಗಳನ್ನು ತರಲು ನದಿ ಮೂಲಕ ದೋಣಿಯಲ್ಲಿ ಸಾಗುತ್ತಿದ್ದರು. ಆನಂತರ ಅವುಗಳನ್ನು ಸ್ಥಳೀಯರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಇಂದು ಅದೇ ಉದ್ದೇಶದಿಂದ ಸಾಗುತ್ತಿದ್ದ ಜನರು ದೋಣಿ ಅಪಘಾತಕ್ಕೀಡಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಸದ್ಯ ಕಾರ್ಯಾಚರಣೆ ಮುಂದುವರೆದಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا