Urdu   /   English   /   Nawayathi

ಹೊಸ ಕ್ರೆಡಿಟ್‌ ಸೊಸೈಟಿ ನೋಂದಾವಣೆಗೆ ನಿಷೇಧ : ಗೋವಾ ಸರಕಾರ ಚಿಂತನೆ

share with us

ಪಣಜಿ: 09 ಜುಲೈ 2019 (ಫಿಕ್ರೋಖಬರ್ ಸುದ್ದಿ) ಹಣಕಾಸು ವಂಚನೆಯನ್ನು ತಡೆಯುವ ಸಲುವಾಗಿ ಮುಂದಿನ ಐದು ವರ್ಷಗಳ ಮಟ್ಟಿಗೆ ಕ್ಯಾಶ್‌ ಕ್ರೆಡಿಟ್‌ ಸೊಸೈಟಿಗಳ ನೋಂದಾವಣೆಯನ್ನು ನಿಷೇಧಿಸುವ ಬಗ್ಗೆ ಗೋವಾ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ಸಂಘಟಿಸಿದ ಕಮ್ಮಟದಲ್ಲಿ ಮಾತನಾಡುತ್ತಿದ್ದ ಗೋವೆಯ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, “ರಾಜ್ಯದಲ್ಲೀಗ ತುಂಬಾ ಕ್ಯಾಶ್‌ ಕ್ರೆಡಿಟ್‌ ಕೋ-ಆಪರೇಟೀವ್‌ ಸೊಸೈಟಿಗಳಿವೆ. ಈ ರೀತಿಯ ಸೊಸೈಟಿಗಳಲ್ಲಿನ ಹಣಕಾಸು ಅಕ್ರಮಗಳು ಮತ್ತೆ ನಡೆಯದಂತೆ ಮಾಡುವ ದಿಶೆಯಲ್ಲಿ ಹೊಸ ಕ್ರೆಡಿಟ್‌ ಸೊಸೈಟಿಗಳ ನೋಂದಾವಣೆಯನ್ನು ನಿಲ್ಲಿಸಲು ನಾವು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು. ಜನರು ತಮ್ಮ ಪರಿಚಿತರಿಂದ ಹಣ ಸಂಗ್ರಹಿಸಿ ಕ್ರೆಡಿಟ್‌ ಸೊಸೈಟಿಗಳನ್ನು ಸ್ಥಾಪಿಸಿ ತಾವು ಅಧ್ಯಕ್ಷರಾಗಿ ಬಳಿಕ ಬೇಕಾಬಿಟ್ಟಿ ಸಾಲಗಳನ್ನು ಕೊಡುತ್ತಾರೆ. ಅಂತಹ ಸೊಸೈಟಿಗಳು ಬಹು ಬೇಗನೆ ಸಂಕಷ್ಟಕ್ಕೆ ಗುರಿಯಾಗಿ ಎರಡೇ ವರ್ಷದಲ್ಲಿ ಮುಚ್ಚಿಹೋಗುತ್ತವೆ ಎಂದು ಸಾವಂತ್‌ ಹೇಳಿದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا