Urdu   /   English   /   Nawayathi

ಮುಂಬೈ ಷೇರುಪೇಟೆಯಲ್ಲಿ ಮಹಾಪತನ... 900 ಅಂಕಗಳ ಕುಸಿತ ಕಂಡ ಸೂಚ್ಯಂಕ!

share with us

ಮುಂಬೈ: 08 ಜುಲೈ 2019 (ಫಿಕ್ರೋಖಬರ್ ಸುದ್ದಿ) ಷೇರು ಪೇಟೆಯಲ್ಲಿ ಮಹಾಪತನವಾಗಿದ್ದು, ಸೆನ್ಸೆಕ್ಸ್​ ಬರೋಬ್ಬರಿ 907 ಅಂಕಗಳ ಕುಸಿತಗೊಂಡಿದ್ದು, ನಿಫ್ಟಿ ಕೂಡ 288 ಅಂಕಗಳ ಪತನವಾಗಿದೆ. 2019ರಲ್ಲೇ ಅತಿ ದೊಡ್ಡ ಪತನ ಇದಾಗಿದ್ದು, ಸೆನ್ಸೆಕ್ಸ್​​ 38,605 ಅಂಕಗಳಲ್ಲಿ ಹಾಗೂ ನಿಫ್ಟಿ 11,523 ಅಂಕಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆಟೋ ಮತ್ತು ಬ್ಯಾಂಕಿಂಗ್​ ಷೇರುಗಳ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಹೂಡಿಕೆದಾರರು ಈ ಷೇರುಗಳ ಮಾರಾಟದಲ್ಲಿ ತೊಡಗಿದ್ದರಿಂದಾಗಿ ಷೇರುಗಳ ಮೌಲ್ಯದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ ಎನ್ನಲಾಗಿದೆ. ವಿದೇಶಿ ಹೂಡಿಕೆದಾರರು ಹಾಗೂ ಹೆಚ್ಚು ಸಂಪತ್ತು ಹೊಂದಿದವರ ಮೇಲೆ ಹೆಚ್ಚಿನ ಕರಭಾರ ಹಾಕಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮಾರಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಲಿಸ್ಟೆಡ್​ ಕಂಪನಿಗಳ ಮೇಲೆ ಹೊಸ ತೆರಿಗೆ ವಿಧಿಸಿರುವುದು ಹಾಗೂ ಇದು ಹೂಡಿಕೆದಾರರ ಪರವಾಗಿ ಇಲ್ಲದಿರುವುದು ಈ ಹಿಂಜರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಎನ್​​ಎಸ್​ಸಿ ಸಹ ಶೇ 5.5 ರಷ್ಟು ಕುಸಿತ ಕಂಡಿದೆ. ರಿಯಾಲಿಟಿ, ಆಟೋ, ಬ್ಯಾಂಕಿಂಗ್​​, ಫೈನಾನ್ಸಿಯಲ್​ ಸರ್ವಿಸಸ್​​, ಮಾಧ್ಯಮ ಹಾಗೂ ಖಾಸಗಿ ಬ್ಯಾಂಕಗಳ ಷೇರುಗಳ ಬೆಲೆಯಲ್ಲಿ 2 ರಿಂದ 3 ರಷ್ಟು ಕುಸಿತ ಕಂಡು ಬಂದಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا