Urdu   /   English   /   Nawayathi

NDAಯದ್ದು ಹತ್ತು ವರ್ಷಗಳ ದೂರದೃಷ್ಟಿಯ ಬಜೆಟ್​: ಸೀತಾರಾಮನ್

share with us

ನವದೆಹಲಿ: 06 ಜುಲೈ 2019 (ಫಿಕ್ರೋಖಬರ್ ಸುದ್ದಿ) 'ಸರ್ಕಾರ ತನ್ನ ಅಂದಾಜಿತ ಬಜೆಟ್​ನ ಗುರಿ ತಲುಪಲಿದ್ದು, ಆರ್​ಬಿಐ ಹಣಕಾಸು ಸಂಸ್ಥೆಗಳಿಗೆ ಮಾರ್ಗದರ್ಶಕನಾಗಲಿ ಕಾರ್ಯನಿರ್ವಹಿಸಲಿದೆ. ಮುಂದಿನ 10 ವರ್ಷಗಳ ದೂರದೃಷ್ಟಿ ಇರಿಸಿಕೊಂಡು ಆಯವ್ಯಯ ಮಂಡಿಸಲಾಗಿದೆ' ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಜೆಟ್​ ಘೋಷಣೆಯ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಾವು ಹತ್ತು ವರ್ಷಗಳಿಗಾಗಿ ಆಯ್ದುಕೊಂಡ ಯೋಜನೆಯ ಉದ್ದೇಶಗಳನ್ನು ಪ್ರಥಮ ಅವಧಿಯ 5 ವರ್ಷಗಳಲ್ಲಿ ತಲುಪುತ್ತೇವೆ. ನಾವು ಹೇಳಿದ ಮೊದಲ ಐದು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯು ಮುಂದಿನ ವರ್ಷಗಳಲ್ಲಿ ಸಾಧಿಸಲಿರುವ ಆರಂಭಿಕ ಹೆಜ್ಜೆಗಳು' ಎಂದರು. ಮುಂದಿನ ಪಂಚ ವರ್ಷಗಳಲ್ಲಿ ಐದಾರು ವಲಯಗಳ ಮೇಲೆ ವಿಶೇಷ ಆಸಕ್ತಿ ವಹಿಸಲಾಗುವುದು. ಈ ಕ್ಷೇತ್ರಗಳು ಮುಖ್ಯವಾಗಿ ಗ್ರಾಮೀಣ ಭಾರತ, ನಗರ ಪ್ರದೇಶಗಳು, ಮಹಿಳೆ, ಸರಳ ಜೀವನ ಅಥವಾ ಭಾರತ ಮೃದು ಶಕ್ತಿಗೆ ಸಂಬಂಧಿಸಿದ್ದವು ಆಗಿರಲಿವೆ ಎಂದರು. ಹೂಡಿಕೆ ಅಥವಾ ತೆರಿಗೆ ಆದಾಯವನ್ನು ನ್ಯಾಯಯುತ ಹಾಗೂ ಕಾರ್ಯಸಾಧು ಮಾಡುವತ್ತ ಗುರಿಯನ್ನು ಬಜೆಟ್​ನಲ್ಲಿ ಇರಿಸಿಕೊಳ್ಳಲಾಗಿದೆ. ಯೋಜನೆಗಳಿಗೆ ಎದುರಾಗುವ ಯಾವುದೇ ಸವಾಲುಗಳನ್ನು ಉತ್ಪ್ರೇಕ್ಷ ಮಾಡುವುದಿಲ್ಲ ಎಂದು ಸೀತಾರಾಮನ್ ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا