Urdu   /   English   /   Nawayathi

ವಿಆರ್ ಎಲ್ ಕಂಪನಿಯ ಹೆಸರು ದುರ್ಬಳಕೆ :6 ಜನರ ಬಂಧನ

share with us

ತೆಲಂಗಾಣ: 06 ಜುಲೈ 2019 (ಫಿಕ್ರೋಖಬರ್ ಸುದ್ದಿ) ವಿಆರ್ ಎಲ್ ಕಂಪನಿಯ ಹೆಸರನ್ನು ದುರ್ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಜನರನ್ನು ಸೈಬರಾಬಾದ್ ಕಮಿಷನರೇಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ವಿಆರ್​ಎಲ್ ಲಾಜಿಸ್ಟಿಕ್ ಲಿಮಿಟೆಡ್ ಕಂಪನಿಯ ಹೆಸರು ಹಾಗೂ ಟ್ರೇಡ್ ಮಾರ್ಕ್​ನ್ನು ಕಾನೂನು ಬಾಹಿರವಾಗಿ ಬಳಸಿ ಜನರಿಗೆ ವಂಚಿಸುತ್ತಿದ್ದರು ಎನ್ನಲಾಗಿದೆ. ವಿಆರ್​​ಎಲ್ ಕಂಪನಿಯ ಟ್ರೇಡ್ ಮಾರ್ಕಿನಲ್ಲಿ ಕೊಂಚ ಬದಲಾವಣೆ ಮಾಡಿ ವಂಚಿಸುತ್ತಿದ್ದರಿಂದ ಹಲವಾರು ಜನರು ಇವರ ವಂಚನೆಯ ಬಲೆಗೆ ಬಿದ್ದಿದ್ದರು. ಇದರಿಂದಾಗಿ ಕಂಪನಿಗೆ ದೊಡ್ಡಮಟ್ಟದ ಆರ್ಥಿಕ ನಷ್ಟ ಉಂಟಾಗಿತ್ತು. ಈ ಬಗ್ಗೆ ವಿ.ಆರ್.ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಉಪಾಧ್ಯಕ್ಷ ಧ್ರುವರಾಜ್ ಜಾಗೀರ್ದಾರ್ ತೆಲಂಗಾಣದ ರ್ಪೆಟ್ಬಶಿರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ ಪೋಲಿಸರು 6 ಜನ ವಂಚಕರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಸಂದೀಪ್ ಕುಮಾರ್, ಮುಕೇಶ್, ಅನಿಲ್ ಕುಮಾರ್, ರಾಕೇಶ್ , ಮುಕೇಶ್ ಕುಮಾರ್, ರಾಧೇಶಂ ಎಂದು ಗುರುತಿಸಲಾಗಿದ್ದು, ಇವರ ಮೇಲೆ ಐಪಿಸಿ ಸೆಕ್ಷನ್ 420(ವಂಚನೆ), ಟ್ರೇಡ್ ಮಾರ್ಕ್ ಆ್ಯಕ್ಟ್ 104 ಮತ್ತು ಕಾಪಿ ರೈಟ್ ಆ್ಯಕ್ಟ್ 63ರ ಅನ್ವಯ ಪ್ರಕರಣವನ್ನು ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಸೈಬರಾಬಾದ್ ಕಮಿಷನರೇಟ್ ಎಸಿಪಿ, ಸಾರ್ವಜನಿಕರು ಇಂತಹ ವಂಚಕರ ಬಗ್ಗೆ ಜಾಗೃತರಾಗಿ ಇರುವಂತೆ ಸೂಚಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا