Urdu   /   English   /   Nawayathi

ಮಳೆಯಿಂದಾಗಿ ಮನೆ ಮೇಲೆ ಉರುಳಿದ ಮರ

share with us

ಯಲ್ಲಾಪುರ: 03 ಜುಲೈ 2019 (ಫಿಕ್ರೋಖಬರ್ ಸುದ್ದಿ) ತಾಲೂಕಿನಲ್ಲಿ ಒಂದು ದಿನದ ಮಟ್ಟಿಗೆ ಬಿಡುವು ನೀಡಿದ್ದ ಮಳೆ ಮಂಗಳವಾರ ಮತ್ತೆ ಚುರುಕುಗೊಂಡಿದೆ. ಜೋರಾದ ಗಾಳಿ-ಮಳೆಗೆ ತಾಲೂಕಿನ ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ನಂದಿಬಾವಿಯಲ್ಲಿ ಮನೆ ಮೇಲೆ ಮರವೊಂದು ಬಿದ್ದು ಹಾನಿಯಾಗಿದೆ. ನಂದಿಬಾವಿ ನಿವಾಸಿ ದೇವೇಂದ್ರ ಚಂದ್ರು ಸಿದ್ದಿ ಇವರ ಮನೆ ಮೇಲೆ ಮನೆ ಪಕ್ಕದಲ್ಲಿದ್ದ ಮರವೊಂದು ಮುರಿದು ಬಿದ್ದಿದೆ. ಮಂಗಳವಾರ ಬೆಳಗಿನ ಜಾವ ಘಟನೆ ಸಂಭವಿಸಿದಾಗ ಮನೆಯವರೆಲ್ಲ ನಿದ್ರೆಯಲ್ಲಿದ್ದರು. ಮರ ಬಿದ್ದ ರಭಸಕ್ಕೆ ಎಚ್ಚರವಾಗಿ ಹೊರಗೆ ಓಡಿ ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದಿರುವುದರಿಂದ ಮನೆ ಮೇಲ್ಛಾವಣಿ, ಗೋಡೆ ಹಾಗೂ ಮನೆಯಲ್ಲಿದ್ದ ಸಾಮಗ್ರಿಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಗ.ರಾ. ಭಟ್ಟ, ಪಿಡಿಒ ಶ್ರೀಧರ ಪಟಗಾರ, ಗ್ರಾಮ ಲೆಕ್ಕಾಧಿಕಾರಿ ಸವಿತಾ ಭಜಂತ್ರಿ, ಗ್ರಾಪಂ ಸದಸ್ಯರಾದ ತ್ರಿವೇಣಿ ಸಿದ್ದಿ, ಖೈತಾನ್ ಡಿಸೋಜಾ ಭೇಟಿ ನೀಡಿ ಪರಿಶೀಲಿಸಿದ್ದು, ಒಂದು ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಿದ್ದಾರೆ.

ಸಿದ್ದಾಪುರ ತಾಲೂಕಲ್ಲಿ 419 ಮಿಮೀ ಮಳೆ: ಸಿದ್ದಾಪುರ: ತಾಲೂಕಿನಾದ್ಯಂತ ಆಗಾಗ ಮಳೆ ಬೀಳುತ್ತಿದ್ದು, ಸೋಮವಾರ ಅಣಲೇಬೈಲ್ ಗ್ರಾ.ಪಂ. ವ್ಯಾಪ್ತಿಯ ಕೆಳಗಿನ ಸರಕುಳಿಯ ಗಣಪತಿ ಗೌಡ ಅವರ ಮನೆ ಮೇಲೆ ಮರವೊಂದು ಬಿದ್ದು ಅಪಾರ ಹಾನಿಯಾಗಿದೆ. ತಾಲೂಕಿನಲ್ಲಿ ಇಲ್ಲಿಯವರೆಗೆ 419.8 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇಲ್ಲಿಯವರೆಗೆ 867 ಮಿ.ಮೀ. ಮಳೆ ಬಿದ್ದಿತ್ತು. 

ಜಿಲ್ಲೆಯ ಕೆಲವೆಡೆ ಉತ್ತಮ ಮಳೆ:ಕಾರವಾರ: ಜಿಲ್ಲೆಯಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಕೆಲವೆಡೆ ಉತ್ತಮ ಮಳೆಯಾದರೆ ಇನ್ನು ಕೆಲವೆಡೆ ಬಿಸಿಲಿನ ವಾತಾವರಣವಿದೆ. ಮಳೆಯಿಂದ ಯಾವುದೇ ಹಾನಿಯಾಗಿಲ್ಲ. ಮಂಗಳವಾರ ಬೆಳಗಿನ ವರೆಗೆ ಜಿಲ್ಲೆಯಲ್ಲಿ ಸರಾಸರಿ 8.7 ಮಿಮೀ ಮಳೆಯಾಗಿದೆ. ಅಂಕೋಲಾದಲ್ಲಿ 3.6, ಹಳಿಯಾಳದಲ್ಲಿ 1, ಕಾರವಾರದಲ್ಲಿ 22, ಮುಂಡಗೋಡಿನಲ್ಲಿ 1.6, ಶಿರಸಿಯಲ್ಲಿ 8, ಯಲ್ಲಾಪುರದಲ್ಲಿ 6,4, ಭಟ್ಕಳದಲ್ಲಿ 15.8, ಹೊನ್ನಾವರದಲ್ಲಿ 2.8, ಕುಮಟಾದಲ್ಲಿ 3.6, ಸಿದ್ದಾಪುರದಲ್ಲಿ 13.2, ಜೊಯಿಡಾದಲ್ಲಿ 1 ಮಿಮೀ ಮಳೆಯಾಗಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا