Urdu   /   English   /   Nawayathi

ನಕಲಿ ಚಿನ್ನ ಮಾರಲೆತ್ನಿಸಿದ ಇಬ್ಬರ ಬಂಧನ

share with us

ಕಾರವಾರ: 01 ಜುಲೈ 2019 (ಫಿಕ್ರೋಖಬರ್ ಸುದ್ದಿ) ನಕಲಿ ಚಿನ್ನ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಇಲ್ಲಿನ ಶಹರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಗುಜರಾತ್ ಗಾಂಧಿನಗರ ಮೂಲದ ಹರಿಲಾಲ್ (62) ಹಾಗೂ ಆತನ ಪುತ್ರ ಪನ್ನಾಲಾಲ್ (36) ಬಂಧಿತರು. ಆರೋಪಿಗಳಿಂದ ಸುಮಾರು ಎರಡು ಕೆ.ಜಿ. ನಕಲಿ ಚಿನ್ನ ಹಾಗೂ 1 ಗ್ರಾಮ ಅಸಲಿ ಚಿನ್ನ ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ತಮ್ಮ ಹೊಲದಲ್ಲಿ ಹೊಂಡ ತೆಗೆಯುವಾಗ ಬಂಗಾರ ಸಿಕ್ಕಿದೆ. ಊರಲ್ಲಿ ಮಾರಾಟ ಮಾಡಿದರೆ ಎಲ್ಲರಿಗೂ ಗೊತ್ತಾಗಿ ಸರ್ಕಾರ ವಶಪಡಿಸಿಕೊಳ್ಳುತ್ತದೆ. ಇದರಿಂದ ಇಲ್ಲಿಗೆ ಬಂದಿದ್ದೇವೆ ಎಂದು ನಂಬಿಸುತ್ತಿದ್ದರು. 2 ಕೆಜಿಯಷ್ಟು ಚಿನ್ನದ ಸಣ್ಣ ಮಣಿಗಳನ್ನು 2 ಲಕ್ಷ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದರು. ನಗರದ ಗ್ರೀನ್ ಸ್ಟ್ರೀಟ್​ನ ವ್ಯಕ್ತಿಯೊಬ್ಬರು ಇವರ ವರ್ತನೆಯ ಬಗ್ಗೆ ಅನುಮಾನಗೊಂಡು ನೀಡಿದ ಮಾಹಿತಿಯ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಇಬ್ಬರು ಮೊದಲು ಜನರಿಗೆ ಅಸಲಿ ಚಿನ್ನದ ಗುಂಡುಗಳನ್ನೇ ತೋರಿಸಿ ನಂಬಿಸುತ್ತಿದ್ದರು. ನಂತರ ನಕಲಿ ಚಿನ್ನ ಮಾರಾಟಕ್ಕೆ ಯತ್ನಿಸಿದ್ದರು. ಈ ಸಂಬಂಧ ಯಾರೂ ದೂರು ನೀಡಿಲ್ಲ. ಇನ್ನು ಯಾರಿಗಾದರೂ ವಂಚಿಸಿದ್ದಾರೆಯೇ ಎಂಬ ಮಾಹಿತಿ ಇಲ್ಲ. ಅಲ್ಲದೆ, ಜಾಲದಲ್ಲಿ ಇನ್ನೂ ಕೆಲವು ಜನರಿರುವ ಶಂಕೆ ಇದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا