Urdu   /   English   /   Nawayathi

ಮಾಲೀಕನ ಎದುರೆ ಮೇಕೆಯನ್ನು ಕೊಂದು ಹಾಕಿದ ಹೆಬ್ಬಾವು.... ಭಯಾನಕ ಫೋಟೋ ಇಲ್ಲಿವೆ

share with us

ಹೈದ್ರಾಬಾದ್​: 01 ಜುಲೈ 2019 (ಫಿಕ್ರೋಖಬರ್ ಸುದ್ದಿ) ಮಾಲೀಕರ ಮುಂದೆಯೇ ಮೇಕೆಯೊಂದನ್ನು ಹೆಬ್ಬಾವು ಸುತ್ತಿಕೊಂಡು ಸಾಯಿಸಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ಕಂಡು ಬಂದಿದೆ. ಸಂಗರೆಡ್ಡಿ ಜಿಲ್ಲೆಯ ಕಾಂಗ್ತಿ ಎಂಬ ಗ್ರಾಮದ ಇಬ್ಬರು ಕುರಿಗಾಹಿಗಳಾದ ಹುಲಪ್ಪ ಮತ್ತು ಜರಪ್ಪ ತಮ್ಮ ಮೇಕೆಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಬೃಹತ್ ಹೆಬ್ಬಾವೊಂದು ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಮೇಕೆಯನ್ನು ಸುತ್ತಿಕೊಂಡಿದೆ.

python

ತಕ್ಷಣ ಏನೂ ಮಾಡಬೇಕೆಂದು ಆ ಇಬ್ಬರು ಕುರಿಗಾಹಿಗಳು ಭಯಬೀತರಾಗಿ ಅಲ್ಲೇ ನಿಂತಿದ್ದಾರೆ. ನೋಡು ನೋಡುತ್ತಲೇ ಹೆಬ್ಬಾವು ಮೇಕೆಯನ್ನು ಬಲವಾಗಿ ಸುತ್ತಿಕೊಂಡಿದೆ. ಸ್ವಲ್ಪ ಸಮಯದ ನಂತರ ದೈರ್ಯ ಮಾಡಿದ ಜರಪ್ಪ ಹೆಬ್ಬಾವನ್ನು ಮೇಕೆಯಿಂದ ಬಿಡಿಸಿದ್ದಾನೆ. ಆದರೆ ಅಷ್ಟರಲ್ಲಿ ಹೆಬ್ಬಾವು ತನ್ನ ಬಲದಿಂದ ಮೇಕೆಯನ್ನು ಕೊಂದುಹಾಕಿದೆ.

python

ಮೇಕೆಯನ್ನು ಕೊಂದು ಹಾಕಿದ ಹೆಬ್ಬಾವು

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا