Urdu   /   English   /   Nawayathi

ಅಮೆರಿಕಾದ ಟೆಕ್ಸಾಸ್ ನಲ್ಲಿ ವಿಮಾನ ಅಪಘಾತ: 10 ಪ್ರಯಾಣಿಕರು ಸಾವು

share with us

ಡಲ್ಲಾಸ್: 01 ಜುಲೈ 2019 (ಫಿಕ್ರೋಖಬರ್ ಸುದ್ದಿ) ಡಲ್ಲಾಸ್ ಪ್ರದೇಶದ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗುವಾಗ ಹ್ಯಾಂಗರ್ (ವಿಮಾನಖಾನೆ)ಗೆ ಡಿಕ್ಕಿ ಹೊಡೆದು 10 ಮಂದಿ ಮೃತಪಟ್ಟಿರುವ ಘಟನೆ ಟೆಕ್ಸಾಸ್ ನ ಅಡಿಸನ್ ಪಟ್ಟಣದಲ್ಲಿ ನಡೆದಿದೆ. ಅವಳಿ ಎಂಜಿನ್ ವಿಮಾನಕ್ಕೆ ಹತ್ತಿದ ಯಾವೊಬ್ಬ ಪ್ರಯಾಣಿಕರು ಬದುಕುಳಿಯಲಿಲ್ಲ, ಈ ದುರ್ಘಟನೆ ಡಲ್ಲಾಸ್ ನಿಂದ ಉತ್ತರಕ್ಕೆ 20 ಮೈಲಿ ದೂರದಲ್ಲಿ ಅಡಿಸನ್ ಮುನ್ಸಿಪಲ್ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ವಕ್ತಾರೆ ಮೇರಿ ರೊಸೆನ್ಬ್ಲೀತ್ ತಿಳಿಸಿದ್ದಾರೆ. ಬೀಚ್ ಕ್ರಾಫ್ಟ್ ಬಿಇ-350 ಕಿಂಗ್ ಏರ್ ನಿನ್ನೆ ಬೆಳಗ್ಗೆ 9 ಗಂಟೆ ವೇಳೆಗೆ ಟೇಕ್ ಆಫ್ ಆದ ಕೂಡಲೇ ಹ್ಯಾಂಗರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಕೂಡಲೇ ಜ್ವಾಲೆ ಧಗಧಗಿಸಿ ಉರಿದು ವಿಮಾನ ಭಸ್ಮವಾಯಿತು. ಡಿಕ್ಕಿ ಹೊಡೆದ ಕಟ್ಟಡದಿಂದ ಹೊಗೆ ಸೂಸುತ್ತಿದ್ದು ಹ್ಯಾಂಗರ್ ನಲ್ಲಿ ರಂಧ್ರವುಂಟಾಗಿದೆ. ಮೃತ ಪ್ರಯಾಣಿಕರ ಗುರುತನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಮೃತರ ಕುಟುಂಬಗಳನ್ನು ಸಂಪರ್ಕಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا