Urdu   /   English   /   Nawayathi

ಕಿಮ್ ಜೊಂಗ್ ಉನ್-ಟ್ರಂಪ್ ಭೇಟಿ: ಉತ್ತರ ಕೊರಿಯಾಕ್ಕೆ ಕಾಲಿಟ್ಟ ಮೊದಲ ಅಮೆರಿಕ ಅಧ್ಯಕ್ಷ

share with us

ಪಮ್ಮಂಜೋಮ್(ದಕ್ಷಿಣ ಕೊರಿಯಾ): 30 ಜೂನ್ 2019 (ಫಿಕ್ರೋಖಬರ್ ಸುದ್ದಿ)ಭಾನುವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾಗೆ ಭೇಟಿ ನೀಡುವ ಮೂಲಕ ಇದೇ ಮೊದಲ ಬಾರಿ ಅಮೆರಿಕಾ ಅಧ್ಯಕ್ಷರೊಬ್ಬರು ಕೊರಿಯಾ ರಾಷ್ಟ್ರಕ್ಕೆ ಭೇಟಿ ಕೊಟ್ಟ ದಾಖಲೆ ಬರೆದರು. ಅಮೆರಿಕಾ ಅಧ್ಯಕ್ಷ ಟ್ರಂಪ್ ತನ್ನ ಮಿತ್ರರಾಶ್ಃತ್ರ ಪಟ್ಟಿಯಲ್ಲಿಲ್ಲದ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಯನ್ ಅವರನ್ನು ಭೇಟಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. 1950-53ರ ಕೊರಿಯನ್ ಯುದ್ಧದಲ್ಲಿ ತಮ್ಮ ಎರಡು ದೇಶಗಳು ಮತ್ತು ಅವರ ಮಿತ್ರರಾಷ್ಟ್ರಗಳು ಪರಸ್ಪರ ಹೋರಾಡಿದ ಸ್ಥಳವನ್ನು ಗುರುತಿಸುವ ರೇಖೆಯ ಮೇಲೆ ಕಿಮ್ ಜೊತೆ ಕೈಕುಲುಕಿದ ನಂತರ, ಟ್ರಂಪ್ ಮತ್ತೊಂದು ಹ್ಯಾಂಡ್ಶೇಕ್ ಮಾಡುವ ಮೊದಲು ಉತ್ತರ ಕೊರಿಯಾದ ಭೂಪ್ರದೇಶದಲ್ಲಿ ಹಲವಾರು ಹೆಜ್ಜೆ ಮುಂದಿಟ್ಟಿದ್ದರು. ನಂತರ ಇಬ್ಬರು ಒಟ್ಟಿಗೆ ಸಿಯೋಲ್‌ನ ಭೂಪ್ರದೇಶಕ್ಕೆ ಕಾಲಿಟ್ಟು ಹಲವಷ್ಟು ದೂರ್ ನಡೆದುಕೊಂಡು ಹೋಗಿದ್ದು ಪತ್ರಿಕಾ ವರದಿಗಾರರು ಈ ಇಬ್ಬರು ನಾಯಕರ ಚಿತ್ರಗಳನ್ನು ಸೆರೆ ಹಿಡಿದ್ದಾರೆ.ಮತ್ತೆ ಅಲ್ಲಿ ಅವರನ್ನು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್-ಜಿ-ಇನ್ ಸಹ ಸೇರಿಕೊಂಡರು.

Donald J. Trump@realDonaldTrump

After some very important meetings, including my meeting with President Xi of China, I will be leaving Japan for South Korea (with President Moon). While there, if Chairman Kim of North Korea sees this, I would meet him at the Border/DMZ just to shake his hand and say Hello(?)!

156K

4:21 AM - Jun 29, 2019

Twitter Ads info and privacy

72.5K people are talking about this

"ಇದು ಜಗತ್ತಿಗೆ ಉತ್ತಮ ದಿನ ಮತ್ತು ಇಲ್ಲಿಗೆ ಬಂದಿರುವುದು ನನ್ನ ಪಾಲಿಗೆ ಗೌರವದ ವಿಷಯ. ಬಹಳಷ್ಟು ದೊಡ್ಡ ಸಂಗತಿಗಳು ನಡೆಯುತ್ತಿವೆ" ಎಂದು ಟ್ರಂಪ್ ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا