Urdu   /   English   /   Nawayathi

ಕಾರವಾರದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ

share with us

ಕಾರವಾರ: 23 ಜೂನ್ 2019 (ಫಿಕ್ರೋಖಬರ್ ಸುದ್ದಿ) ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್ ಪಕ್ಕದಲ್ಲೇ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಮುಂಬೈನ ಅಟೋಮಿಕ್ ಎನರ್ಜಿ ಬೋರ್ಡ್ ಅನುಮತಿ ನೀಡಿದೆ. ನೂತನವಾಗಿ ನಿರ್ವಣವಾಗಲಿರುವ 400 ಹಾಸಿಗೆಗಳ ಆಸ್ಪತ್ರೆಯ ಕಟ್ಟಡದಲ್ಲಿ ಕ್ಯಾನ್ಸರ್ ಆಸ್ಪತ್ರೆಯೂ ಇರಲಿದೆ. ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡಕ್ಕಾಗಿ 2017 ರ ಬಜೆಟ್​ನಲ್ಲೇ 18 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಘೊಷಿಸಿದೆ. ಅದರಲ್ಲಿ ಐದು ಕೋಟಿ ರೂ.ಗಳನ್ನು ಸರ್ಕಾರಿ ಮೆಡಿಕಲ್ ಕಾಲೇಜ್​ಗೆ ಈಗಾಗಲೇ ಮಂಜೂರು ಮಾಡಲಾಗಿದೆ. ಮುಂಬೈನ ಟಾಟಾ ಮೆಮೋರಿಯಲ್ ಇನ್​ಸ್ಟಿಟ್ಯೂಟ್ ಕ್ಯಾನ್ಸರ್ ಆಸ್ಪತ್ರೆಗೆ ಬೇಕಾದ ಸುಮಾರು 2 ಕೋಟಿ ರೂ. ವೆಚ್ಚದ ಸಾಮಗ್ರಿಗಳನ್ನು ನೀಡಲು ಮುಂದಾಗಿದೆ ಎಂದು ಸರ್ಕಾರಿ ಮೆಡಿಕಲ್ ಕಾಲೇಜ್​ನ ನಿರ್ದೇಶಕ ಡಾ.ಶಿವಾನಂದ ದೊಡ್ಮನಿ ಮಾಹಿತಿ ನೀಡಿದ್ದಾರೆ.

ಜಾಗ ತಿರಸ್ಕೃತ: ಕ್ಯಾನ್ಸರ್ ಆಸ್ಪತ್ರೆ ನಿರ್ವಣಕ್ಕಾಗಿ ಶಿರವಾಡದಲ್ಲಿ 4 ಎಕರೆ ಅರಣ್ಯ ಭೂಮಿಯನ್ನು ಜಿಲ್ಲಾಡಳಿತ 2017 ರಲ್ಲೇ ಮಂಜೂರು ಮಾಡಿತ್ತು. ಆದರೆ, ಕಳೆದ ವರ್ಷ ಸ್ಥಳ ಪರಿಶೀಲನೆ ನಡೆಸಿದ್ದ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ತಜ್ಞರ ತಂಡ ಶಿರವಾಡದಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಜಾಗ ಸೂಕ್ತವಾಗಿಲ್ಲ ಎಂದು ತಿರಸ್ಕಾರ ಮಾಡಿತ್ತು. ಅಲ್ಲದೆ, ಮುಖ್ಯ ಆಸ್ಪತ್ರೆಯ ಸಮೀಪವೇ ಕ್ಯಾನ್ಸರ್ ಆಸ್ಪತ್ರೆಯೂ ಇರುವುದು ಒಳಿತು ಎಂದಿತ್ತು. ಈ ಕಾರಣಕ್ಕಾಗಿ ನೂತನ ಆಸ್ಪತ್ರೆ ಕಟ್ಟಡದ ಯೋಜನೆಯಲ್ಲೇ ಕ್ಯಾನ್ಸರ್ ಆಸ್ಪತ್ರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಡಾ.ದೊಡ್ಮನಿ ತಿಳಿಸಿದ್ದಾರೆ.

ಟ್ರಾಮಾ ಸೆಂಟರ್​ಗೂ ಅವಕಾಶ: 400 ಹಾಸಿಗೆಗಳ ಆಸ್ಪತ್ರೆಯ ನೆಲ ಮಹಡಿಯ ತುರ್ತು ಚಿಕಿತ್ಸಾ ಘಟಕದ ಪಕ್ಕದಲ್ಲೇ ಟ್ರಾಮಾ ಸೆಂಟರ್​ಗೂ ಜಾಗ ನಿಗದಿ ಮಾಡಲಾಗಿದೆ. ಟ್ರಾಮಾ ಸೆಂಟರ್ ನಿರ್ವಣಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಆದರೆ, ಮುಂದೆ ಯಾವುದೇ ಬೆಳವಣಿಗೆಯಾಗಿಲ್ಲ ಎಂದು ಅವರು ವಿವರಿಸಿದ್ದಾರೆ.

ಜಾಗದ್ದೇ ಸಮಸ್ಯೆ: ಜಿಲ್ಲಾ ಕಾರಾಗೃಹ ಸ್ಥಳಾಂತರ ವಿಳಂಬವಾಗಿದ್ದು, ಸರ್ಕಾರಿ ಮೆಡಿಕಲ್ ಕಾಲೇಜ್​ನ ನೂತನ 400 ಹಾಸಿಗೆಗಳ ಆಸ್ಪತ್ರೆ ನಿರ್ವಣಕ್ಕೆ ತೊಡಕುಂಟಾಗುವ ಸಾಧ್ಯತೆ ಇದೆ. ಈಗ ಮೆಡಿಕಲ್ ಕಾಲೇಜ್ ಜೊತೆ ಇರುವ ಜಿಲ್ಲಾ ಆಸ್ಪತ್ರೆಯಲ್ಲಿ 300 ಹಾಸಿಗೆ ವ್ಯವಸ್ಥೆ ಇದೆ. ಇನ್ನೂ 400 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲು 2019 ರ ಬಜೆಟ್​ನಲ್ಲಿ ಸರ್ಕಾರ 150 ಕೋಟಿ ರೂ. ಘೊಷಿಸಿದೆ. ಆರೋಗ್ಯ ಇಲಾಖೆ ಇಂಜಿನಿಯರ್​ಗಳ ತಂಡ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದೆ. ವಿಸ್ತ್ರತ ನೀಲಿನಕ್ಷೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ಆಡಳಿತಾತ್ಮಕ ಅನುಮೋದನೆ ಮಾತ್ರ ಬಾಕಿ ಇದೆ. 400 ಹಾಸಿಗೆಗಳ ಆಸ್ಪತ್ರೆ ಕಟ್ಟಡದ ನೀನ ನಕ್ಷೆಯನ್ನು ಜಿಲ್ಲಾ ಕಾರಾಗೃಹದ ಜಾಗವನ್ನೂ ಸೇರಿಸಿ ರೂಪಿಸಲಾಗಿದೆ. ಆದರೆ, ಜಿಲ್ಲಾ ಕಾರಾಗೃಹ ಸ್ಥಳಾಂತರ ವಿಳಂಬವಾಗುವ ಸಾಧ್ಯತೆ ಇದ್ದು, ಸಮಸ್ಯೆಗೆ ಕಾರಣವಾಗಿದೆ.

ಕ್ಯಾನ್ಸರ್ ಆಸ್ಪತ್ರೆಗೆ ವಿಕಿರಣ ಸಂಬಂಧಿ ಯಂತ್ರಗಳನ್ನು ಅಳವಡಿಸುವ ಹಿನ್ನೆಲೆಯಲ್ಲಿ ಅದಕ್ಕೆ ಎಇಆರ್​ಬಿ ಅನುಮತಿ ಬೇಕಿದೆ. ಬೋರ್ಡ್​ನ ಎಲ್ಲ ನಿಯಮಾವಳಿಗಳನು ಪೂರೈಸಿ ಅನುಮತಿ ಪಡೆಯಲಾಗಿದೆ. 400 ಹಾಸಿಗೆಗಳ ಹೊಸ ಆಸ್ಪತ್ರೆ ಕಟ್ಟಡದಲ್ಲಿ ಕ್ಯಾನ್ಸರ್ ಆಸ್ಪತ್ರೆಯೂ ಸೇರಿದೆ. ಜಿಲ್ಲಾ ಕಾರಾಗೃಹ ಸ್ಥಳಾಂತರವಾಗದಿದ್ದಲ್ಲೂ ಸದ್ಯಕ್ಕೆ ಇರುವ ಜಾಗದಲ್ಲೇ ಆಸ್ಪತ್ರೆ ಹೊಂದಿಸಿ ಆಸ್ಪತ್ರೆ ನಿರ್ವಣಕ್ಕೆ ಯೋಜಿಸಲಾಗಿದೆ. ಮುಂದೆ ಹಾಸ್ಟೆಲ್ ಇತರ ಸೌಲಭ್ಯಗಳಿಗೆ ಜಿಲ್ಲಾ ಕಾರಾಗೃಹದ ಜಾಗ ಬಳಸಿಕೊಳ್ಳಬಹುದಾಗಿದೆ. | ಡಾ.ಶಿವಾನಂದ ದೊಡ್ಮನಿ, ಕಾರವಾರ ಸರ್ಕಾರಿ ವೈದ್ಯಕೀಯ ಕಾಲೇಜ್ ನಿರ್ದೇಶಕ

 ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا