Urdu   /   English   /   Nawayathi

ರಾಜೀನಾಮೆ ನಿರ್ಧಾರಕ್ಕೆ ರಾಹುಲ್ ಗಾಂಧಿ ಬದ್ಧ.. ಕಾಂಗ್ರೆಸ್​ ಅಧ್ಯಕ್ಷ ಗಾದಿಯ ರೇಸ್​ನಲ್ಲಿ ಅಶೋಕ್‌ ಗೆಹ್ಲೋಟ್​?

share with us

ನವದೆಹಲಿ: 23 ಜೂನ್ 2019 (ಫಿಕ್ರೋಖಬರ್ ಸುದ್ದಿ) ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ರಾಹುಲ್​ಗಾಂಧಿ ನಿರ್ಧಾರ ಅಚಲವಾದಂತಿದೆ. ಅವರ ಸ್ಥಾನಕ್ಕೆ ಈಗಾಗಲೇ ಮತ್ತೊಬ್ಬ ನಾಯಕನ ಹೆಸರು ಸಹ ಕೇಳಿ ಬಂದಿದೆ. ರಾಹುಲ್‌ ಬದಲು ರಾಜಸ್ಥಾನದ ಸಿಎಂ ಅಶೋಕ್​ ಗೆಹ್ಲೋಟ್​ ಅವರು ಕಾಂಗ್ರೆಸ್​ ಅಧ್ಯಕ್ಷರಾಗ್ತಾರೆ ಎಂದು ಮೂಲಗಳು ತಿಳಿಸಿವೆ. ಅಧ್ಯಕ್ಷ ಸ್ಥಾನದೊಂದಿಗೆ ಅವರು ಸಿಎಂ ಆಗಿಯೂ ಮುಂದುವರೆಯಲಿದ್ದಾರೆ ಎನ್ನಲಾಗ್ತಿದೆ. ಸಿಎಂ ಆಗಿದ್ದವರೂ ಪಕ್ಷದ ಅಧ್ಯಕ್ಷ ಸ್ಥಾನ ನಿಭಾಯಿಸಿದ್ದಾರೆ ಎಂಬುದು ಗೆಹ್ಲೋಟ್​ ಬೆಂಬಲಿಗರ ವಾದವಾಗಿದೆ. ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್​, ಅಖಿಲೇಶ್​ ಯಾದವ್​, ಮಾಯಾವತಿ, ಜಯಲಲಿತಾರ ಹೆಸರುಗಳನ್ನೂ ಅವರು ಉದಾಹರಣೆಯಾಗಿ ನೀಡಿದ್ದಾರೆ. ಗೆಹ್ಲೋಟ್​ ಅಧ್ಯಕ್ಷ ಸ್ಥಾನಕ್ಕೇರಲು ಗಾಂಧಿ ಕುಟುಂಬದಿಂದಲೂ ಅಭ್ಯಂತರವಿಲ್ಲ ಎಂದು ತಿಳಿದುಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯ ಸೋಲು ಅನುಭವಿಸಿದ ನಂತರ ರಾಹುಲ್, ಅಧ್ಯಕ್ಷ ಸ್ಥಾನಕ್ಕೆ ಗುಡ್​ ಬೈ ಹೇಳುವ ಇಂಗಿತ ವ್ಯಕ್ತಪಡಿಸಿದ್ದರು. ಈಗಲೂ ತಮ್ಮ ನಿರ್ಧಾರಕ್ಕೆ ಅವರು ಬದ್ಧರಾಗಿದ್ದಾರೆ. ಹಾಗಾಗಿ ಅಧ್ಯಕ್ಷರ ಆಯ್ಕೆಗಾಗಿ ಕಾಂಗ್ರೆಸ್​ ಸಕಲ ರೀತಿಯ ಪ್ರಯತ್ನ ನಡೆಸುತ್ತಿದ್ದು, ಈ ರೇಸ್​​ನಲ್ಲಿ ಗೆಹ್ಲೋಟ್​ ಮುಂಚೂಣಿಯಲ್ಲಿದ್ದಾರೆನ್ನಲಾಗ್ತಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا