Urdu   /   English   /   Nawayathi

ಡೇಟಿಂಗ್​ಗಾಗಿ ಮೀಟ್​ ಮಾಡಿದ್ದ ಪಬ್​ ಪ್ರಿಯ ಜೋಡಿ ಹೆಣವಾದ್ರು... ಸಿಸಿ ಕ್ಯಾಮೆರಾದಲ್ಲಿ ಬೆಚ್ಚಿ ಬೀಳಿಸುವ ದೃಶ್ಯ ಸೆರೆ

share with us

ಬೆಂಗಳೂರು: 22 ಜೂನ್ 2019 (ಫಿಕ್ರೋಖಬರ್ ಸುದ್ದಿ) ಚರ್ಚ್ ಸ್ಟ್ರೀಟ್ನ ಪಬ್ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಪ್ರಕರಣ ಸಂಬಂಧ ಯುವ ಜೋಡಿಗಳಿಬ್ಬರು ಡೇಟಿಂಗ್ಗಾಗಿ ಪಬ್ಗೆ ಬಂದಿದ್ದರು ಎಂಬ ವಿಚಾರ ಬಹಿರಂಗವಾಗಿದೆ. ಕೆ.ಆರ್.ಪುರ ಮೂಲದ ವೇದಾ (30) ಕಳೆದ ವರ್ಷ ವೈಯಕ್ತಿಕ ಕಾರಣದಿಂದ ಗಂಡನಿಂದ ವಿಚ್ಛೇದನ ಪಡೆದುಕೊಂಡಿದ್ದಳಂತೆ, ಹಾಗೂ ಶಿವಮೊಗ್ಗ ಮೂಲದ ಪವನ್(36) ಹೆಂಡತಿಯೊಂದಿಗೆ ಜಗಳವಾಗಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದ ಎಂದು ತಿಳಿದು ಬಂದಿದೆ. ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ‌ ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಿ‌‌ ಮೃತದೇಹಗಳನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣದ ಬಗ್ಗೆ ಮಾತನಾಡಿದ ಡಿಸಿಪಿ ದೇವರಾಜ್, ನಿನ್ನೆ ರಾತ್ರಿ 11:30ರ ಸಮಯದಲ್ಲಿ ಆ್ಯಶ್ ಬಿಯರ್ ಪಬ್ನಲ್ಲಿ ಇಬ್ಬರೂ ಸಾವನ್ನಪ್ಪಿದ್ದು, ಊಟ ಮುಗಿಸಿ ಬರಬೇಕಾದ್ರೆ ಸ್ಟೆಪ್ಸ್ ಇಳಿಯುವಾಗ ಹುಡುಗಿ ಕಾಲುಜಾರಿದ್ದು ಮುಂದೆ ಇದ್ದ ಹುಡುಗನ ಮೇಲೆ ಬಿದ್ದಿದ್ದಾಳೆ ಇದರಿಂದ ಇಬ್ಬರೂ ಕೆಳಗೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ. ಇನ್ನು ಸ್ಥಳೀಯ ನಿವಾಸಿ ದೀಪಕ್ ರಾವ್ ಎಂಬುವವರು ನೀಡಿದ ದೂರಿನ ಮೇಲೆ, ಬಿಲ್ಡಿಂಗ್ ಓನರ್ ಮತ್ತು ಮ್ಯಾನೇಜರ್ ವಿರುದ್ಧ ದೂರು ದಾಖಲಾಗಿದೆ. ಸದ್ಯ ಮಾನೇಜರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ, ಸಿಸಿಟಿವಿ‌ ಪರಿಶಿಲನೆ ನಡೆಸಿದ್ದು ತನಿಖೆ ಮುಂದುವರೆದಿದೆ ಎಂದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا