Urdu   /   English   /   Nawayathi

ಇದು ಅತಿಯಾಯ್ತು.. ಸರ್ಕಾರಿ ಅಧಿಕಾರಿಯಿಂದ ಕಾಲಿಗೆ ಶೂ ಹಾಕಿಸಿಕೊಂಡ ಯುಪಿ ಮಿನಿಸ್ಟರ್​..

share with us

ನವದೆಹಲಿ: 22 ಜೂನ್ 2019 (ಫಿಕ್ರೋಖಬರ್ ಸುದ್ದಿ) ಸರ್ಕಾರಿ ಅಧಿಕಾರಿಯಿಂದ ತಮ್ಮ ಕಾಲಿಗೆ ಶೂ ಹಾಕಿಸಿಕೊಂಡ ಉತ್ತರಪ್ರದೇಶದ ಸಚಿವ ಲಕ್ಷ್ಮೀನಾರಾಯಣ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ನಿನ್ನೆ ಶಹಜಹಾನ್​ಪುರದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಚಿವರು, ಸರ್ಕಾರಿ ಅಧಿಕಾರಿಯಿಂದ ತಮ್ಮ ಕಾಲಿಗೆ ಶೂ ಹಾಕಿಸಿಕೊಂಡ ವಿಡಿಯೋ ವೈರಲ್ ಆಗಿದೆ.

ANI UP@ANINewsUP

: UP Minister Laxmi Narayan gets his shoelace tied by a government employee at a yoga event in Shahjahanpur, yesterday.

856

7:23 AM - Jun 22, 2019

873 people are talking about this

Twitter Ads info and privacy

ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಅವರು, ಈ ಕಾರ್ಯವನ್ನು ಶ್ಲಾಘಿಸಬೇಕು. ರಾಮನ ಪಾದುಕೆಗಳೇ 14 ವರ್ಷಗಳ ಆಡಳಿತ ಮಾಡಿದ ಭರತ ಭೂಮಿಯಿದು ಎಂದು ಹೇಳಿದ್ದಾರೆ. ಈ ಮೊದಲು, ಒಡಿಶಾ ಸಚಿವ ಜೋಗೇಂದ್ರ ಬೆಹೆರ ಅವರು, ಸ್ವಾತಂತ್ರ್ಯ ದಿನಾಚರಣೆ ವೇಳೆ ತಮ್ಮ ಆಪ್ತ ಭದ್ರತಾ ಅಧಿಕಾರಿಯಿಂದ ಶೂ ಲೇಸ್​ ಕಟ್ಟಿಸಿಕೊಂಡು ಸುದ್ದಿಯಾಗಿದ್ದರು. ಇಂತಹ ಘಟನೆಗಳ ಆಗಾಗ್ಗೆ ವರದಿಯಾಗುತ್ತಲೇ ಇವೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا