Urdu   /   English   /   Nawayathi

ಮುಂಬೈ: ನೌಕಾಪಡೆ ಡಾಕ್ ಯಾರ್ಡ್ ನಲ್ಲಿ ಬೆಂಕಿ ಅನಾಹುತ, ಓರ್ವ ಸಾವು ಇನ್ನೋರ್ವನಿಗೆ ಗಾಯ

share with us

ಮುಂಬೈ: 22 ಜೂನ್ 2019 (ಫಿಕ್ರೋಖಬರ್ ಸುದ್ದಿ) ಶುಕ್ರವಾರ ಸಂಜೆ ಇಲ್ಲಿನ ಮಜಗಾಂವ್ ಡಾಕ್ ಯಾರ್ಡ್‌ನಲ್ಲಿ ನೌಕಾಪಡೆಯ ನಿರ್ಮಾಣ ಹಂತದಲ್ಲಿದ್ದ ಯುದ್ಧನೌಕೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾನೆ ಮತ್ತು ಇನ್ನೊಬ್ಬ ಗಾಯಗೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಜಾಗನ್ ಡಾಕ್ ಶಿಪ್ ಬಿಲ್ಡರ್ಸ್ (ಎಂಡಿಎಸ್ಎಲ್) ಪ್ರಕಟಣೆಯಲ್ಲಿ ಹೇಳಿದಂತೆ ದಕ್ಷಿಣ ಮುಂಬೈನ 12704 ಸಂಖ್ಯೆಯ ಡಾಕ್ ಯಾರ್ಡ್‌ನಲ್ಲಿ ಸಂಜೆ 4 ಗಂಟೆಗೆ  "ಸಣ್ಣ ಬೆಂಕಿ" ಕಾಣಿಸಿಕೊಂಡಿದೆ.ಈ ಸಮಯದಲ್ಲಿ  ಗುತ್ತಿಗೆ ಕಾರ್ಮಿಕರೊಬ್ಬರು ಉಸಿರುಕಟ್ಟುವಿಕೆ ಮತ್ತು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ.ಇನ್ನೊಬ್ಬ ಕಾರ್ಮಿಕನಿಗೆ "ಸಣ್ಣ ಸುಟ್ಟ" ಗಾಯಗಳಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 23 ವರ್ಷದ ಬಜೇಂದ್ರ ಕುಮಾರೆಂದು ಗುರುತಿಸಲಾಗಿರುವ ಗುತ್ತಿಗೆ ಕಾರ್ಮಿಕನನ್ನು  ಹತ್ತಿರದ ಜೆಜೆ ಆಸ್ಪತ್ರೆಗೆ ಸಾಗಿಸಲಾಗಿದೆಯಾದರೂ ಅಷ್ತರಲ್ಲೇ ಆತ ಕೊನೆಯುಸಿರೆಳೆದಿದ್ದಾರೆ ಎಂದು ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.ಗಾಯಗೊಂಡವರ ಗುರುತು ಪತ್ತೆಯಾಗಿಲ್ಲ. ಸಂಜೆ 5.57 ಕ್ಕೆ ಬೆಂಕಿಯ ಬಗೆಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಲಭಿಸಿದೆ.ತಕ್ಷಣ ಕಾರ್ಯಪ್ರೆಅವೃತ್ತವಾಗಿರುವ ತಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಸಂಜೆ 7 ರ ಹೊತ್ತಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಮೂಲಗಳು ಹೇಳಿದೆ. ಬೆಂಕಿಯ ಕಾರಣವನ್ನು ಕಂಡುಹಿಡಿಯಲು ತನಿಖೆ ಕೈಗೊಳ್ಳಲಾಗುವುದು ಎಂದುಕ್ ವಕ್ತಾರರು ತಿಳಿಸಿದ್ದಾರೆ. ಘಟನೆಯಾಗಿರುವ ಯಾರ್ಡ್ ನಲ್ಲಿ ಸ್ಟೆಲ್ತ್ ಗೈಡೆಡ್ ಕ್ಷಿಪಣಿ ವಿಧ್ವಂಸಕ 'ವಿಶಾಖಪಟ್ಟಣಂ' ಅನ್ನು ತಯಾರಿಸಲಾಗುತ್ತಿದೆ. ಎಂಡಿಎಸ್ಎಲ್ ಜತೆಗೆ ಮಾಡಿಕೊಳ್ಳಲಾಗಿರುವ  29,340 ಕೋಟಿ ರೂ.ಗಳ'ಪ್ರಾಜೆಕ್ಟ್ 15-ಬಿ' ಒಪ್ಪಂದದದಡಿಯಲ್ಲಿ ಅಂತಹ ನಾಲ್ಕು ಹಡಗುಗಳನ್ನು ನಿರ್ಮಿಸಲಾಗುತ್ತಿದ್ದು ಇದು ಮೊದಲನೆಯದಾಗಿದೆ.18 ನೇ ಶತಮಾನಕ್ಕೆ ಸೇರಿದ ಈ ಡಾಕ್, ಭಾರತೀಯ ನೌಕಾಪಡೆಯ ಹಡಗು ನಿರ್ಮಾಣದಲ್ಲಿ ಅಗ್ರಗಣ್ಯವಾಗಿದ್ದು ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಇಲ್ಲಿ ಒಪ್ಪಂದ ಮಾಡಿಕೊಳ್ಲಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا