Urdu   /   English   /   Nawayathi

ಮಳ್ಳಿ ತರ ಕಾಣೋ ಈ ಮಾಯಾಂಗನೆ ಮಾಡಿದ್ದೇನು ಗೊತ್ತೇ..?

share with us

ಹುಣಸೂರು: 19 ಜೂನ್ 2019 (ಫಿಕ್ರೋಖಬರ್ ಸುದ್ದಿ) ತಾನು ಪ್ರೊಬೇಷನರಿ ಐಪಿಎಸ್ ಅಧಿಕಾರಿಯ ಸಹೋದರಿ ಎಂಬುದಾಗಿ ಭಾರತ ಮ್ಯಾಟ್ರಿಮೋನಿ ಆ್ಯಪ್‍ನಲ್ಲಿ ಪರಿಚಯಿಸಿಕೊಂಡು ಯುವಕರನ್ನು ಬಲೆಗೆ ಕೆಡವಿ ನಂತರ ಹಣ ನೀಡುವಂತೆ ಬೆದರಿಸುತ್ತಿದ್ದ ಯುವತಿಯನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಕಲ್ಕುಣಿಕೆ ಬಡಾವಣೆ ನಿವಾಸಿ ರಾಜನಾಯ್ಕ ಪುತ್ರಿ ಬಿಎ ಪದವೀಧರೆ ಭಾರತಿ ಅಲಿಯಾಸ್ ಲಾವಣ್ಯ ಅಲಿಯಾಸ್ ಬಾನು ಅಲಿಯಾಸ್ ದಿವ್ಯಾ ಹಾಗೂ ರಮ್ಯಾ ಭಾರತಿ (ನಾಲ್ಕು ಹೆಸರೂ ಒಬ್ಬಳೇ) ಎಂಬಾಕೆಯೇ ಸಿಕ್ಕಿ ಬಿದ್ದವಳು. 

ಘಟನೆ ವಿವರ: ಭಾರತೀಯ ನೌಕಾದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಕೇಶ್ ಪ್ರಸ್ತುತ ಕೋಲ್ಕತ್ತಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈತ ಮೂಲತಃ ಎಚ್‍ಡಿ ಕೋಟೆ ತಾಲೂಕಿನ ಹೆಬ್ಬನಕುಪ್ಪೆ ಗ್ರಾಮದವರು. ಭಾರತ್ ಮ್ಯಾಟ್ರಿಮೋನಿಯಲ್ಲಿ ತಾನು ಅವಿವಾಹಿತೆ, ಎಂಎಸ್‍ಡಬ್ಲ್ಯೂ ಪದವೀಧರೆ ಎಂದು ಭಾರತಿ ಪರಿಚಯಿಸಿಕೊಂಡಿದ್ದಾಳೆ. ತನ್ನ ಅಕ್ಕ ರಮ್ಯಾ ಐಪಿಎಸ್ ಅಧಿಕಾರಿಯಾಗಿದ್ದು, ತಮಿಳುನಾಡಿನ ಕೊಯಮುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದಾಳೆಂದು ಹೇಳಿಕೊಂಡಿದ್ದಳು. ದಿವ್ಯಾ ಹಾಗೂ ರಮ್ಯಾ, ಭಾರತಿ ಎಂದು ಬೇರೆ ಬೇರೆ ಹೆಸರಿನಲ್ಲಿ ಮೂರು ಮೊಬೈಲ್ ನಂಬರ್‍ಗಳಲ್ಲಿ ಆಗಾಗ್ಗೆ ಸಂಪರ್ಕಿಸುತ್ತಿದ್ದಳು. ಲೋಕೇಶ್‍ನನ್ನು ಯಾಮಾರಿಸಿದ್ದಲ್ಲದೆ ಮೊಬೈಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಳು. ಮತ್ತೊಂದೆಡೆ ತಾನು ಲಾವಣ್ಯ ಭಾನುವಿನ ಅಕ್ಕ ದಿವ್ಯಾ ಭಾರತಿ ಐಪಿಎಸ್ ಅಧಿಕಾರಿಯಾಗಿದ್ದು, ನನ್ನ ತಂಗಿ ನಿಮ್ಮನ್ನು ಇಷ್ಟಪಟ್ಟಿದ್ದು ಮದುವೆ ಮಾಡಿಕೊಳ್ಳುವಿರಾ ಎಂದು ಕರೆ ಮಾಡಿದ್ದರಿಂದ ಲೋಕೇಶ್ ಒಪ್ಪಿಗೆ ಸೂಚಿಸಿದ್ದಾನೆ. 2018ರ ಆಗಸ್ಟ್‍ನಲ್ಲಿ ತನ್ನ ಅಕ್ಕ ಐಎಎಸ್ ಸಹ ಬರೆದಿದ್ದಾರೆ ಎಂದು ನಂಬಿಸಿ ಲೋಕೇಶ್‍ನನ್ನು ಬಲೆಗೆ ಕೆಡವಿ ನಿಶ್ಚಿತಾರ್ಥ ಮಾಡಿಕೊಳ್ಳಲು ದುಂಬಾಲು ಬಿದ್ದಿದ್ದಾಳೆ. ಕೊನೆಗೆ ಮನೆಯವರನ್ನು ಒಪ್ಪಿಸಿದ ಲೋಕೇಶ್ 2019ರ ಏಪ್ರಿಲ್ 14ರಂದು ಹುಣಸೂರಿನ ವಾಲ್ಮೀಕಿ ಸಮುದಾಯ ಭವನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆಯನ್ನು ಹುಡುಗಿಯೇ ನಿಗದಿಪಡಿಸಿ ಮೈಸೂರಿನ ಸಿಂಧೂರ ಕಲ್ಯಾಣ ಮಂಟಪದಲ್ಲಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಳು.

ಈ ನಡುವೆ ಮೂವರು ಯುವತಿಯರು ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುವ ಬಗ್ಗೆ ಅನುಮಾನ ಬಂದು, ಧ್ವನಿಯನ್ನು ಪರಿಶೀಲಿಸಿದಾಗ ಒಬ್ಬಳೇ ಯುವತಿ ಎಂಬುದು ಪತ್ತೆಯಾಗಿದೆ.  ನಿಶ್ಚಿತಾರ್ಥದ ವೇಳೆ ಸಹ ಲೋಕೇಶ್‍ನಿಂದ ಸಾಕಷ್ಟು ಹಣ ಪಡೆದಿದ್ದಲ್ಲದೆ, ನಂತರದಲ್ಲಿ ತಂಗಿ ಮತ್ತು ನೀನು ಚೆನ್ನಾಗಿರಲು ಮನೆ ಖರೀದಿಸಲು 13 ಲಕ್ಷ ರೂ. ನೀಡುವಂತೆ ರಮ್ಯಾ ಭಾರತಿ ಹೆಸರಿನಲ್ಲಿ ಫೋನ್ ಮಾಡಿ ಒತ್ತಾಯಿಸಿದ್ದಾಳೆ. ನನ್ನ ಬಳಿ ಹಣವಿಲ್ಲವೆಂದಾಗ ಸಾಲ ಮಾಡಿಕೊಡುವಂತೆ ದುಂಬಾಲು ಬಿದ್ದಿದ್ದಳು. ನಂತರದಲ್ಲಿ ವಂಚಕಿ ಲಾವಣ್ಯ ಬಾನು ನನ್ನ ಅಕ್ಕ ಪೊಲೀಸ್ ಅಧಿಕಾರಿ, ನನ್ನನ್ನು ಮದುವೆಯಾಗಲು ಒಪ್ಪದಿದ್ದರೆ ನಾನು ಕೇಳಿದಷ್ಟು ಹಣ ಕೊಡಬೇಕು. ಇಲ್ಲದಿದ್ದಲ್ಲಿ ನಿಮ್ಮ ಮನೆಯವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆಂದು ಬೆದರಿಸಿದ್ದಳು. ಈಕೆಯ ಮೋಸದ ಜಲದಲ್ಲಿ ತನ್ನ ತಮ್ಮ ಲೋಕೇಶ್ ಸಿಲುಕಿದ್ದು, ಇದರಿಂದ ತಮ್ಮ ಕುಟುಂಬ ಮಾನಸಿಕವಾಗಿ ನೊಂದಿದೆ. ಐಪಿಎಸ್ ಅಧಿಕಾರಿ ಸೋಗಿನಲ್ಲಿ ವಂಚಿಸಿರುವ ಲಾವಣ್ಯ ಭಾರತಿ ವಿರುದ್ಧ ಕಾನೂನು ಕ್ರಮ ಕೈಗೊಂಡು ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ನಗರ ಠಾಣೆಯಲ್ಲಿ ಲೋಕೇಶ್ ಸಹೋದರ ವೆಂಕಟೇಶ್ ದೂರು ನೀಡಿದ್ದರ ಮೇರೆಗೆ ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا