Urdu   /   English   /   Nawayathi

ಕ್ಯೂನಲ್ಲಿ ಬನ್ನಿ ಅಂದ್ರೆ, ಪೊಲೀಸ್​ ಪೇದೆಗೆ ಹೀಗೆ ಹೊಡಿಯೋದಾ!

share with us

ಡಿಯೊರಿಯಾ: 19 ಜೂನ್ 2019 (ಫಿಕ್ರೋಖಬರ್ ಸುದ್ದಿ) ಸರತಿಯಲ್ಲಿ ಬಾರದ ಇಬ್ಬರು ಯುವಕರು, ಈ ಬಗ್ಗೆ ಪ್ರಶ್ನಿಸಿದ ಪೊಲೀಸ್​ ಪೇದೆಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಉತ್ತರಪ್ರದೇಶದ ಡಿಯೊರಿಯಾ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್​ ಪೇದೆಗೆ ಯುವಕರಿಬ್ಬರು ಮನಬಂದಂತೆ ಥಳಿಸಿದ್ದಾರೆ. ಈ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾಗಿ ತಿಳಿದುಬಂದಿದೆ. ಡಿಯೊರಿಯಾ ರೈಲ್ವೆ ನಿಲ್ದಾಣ ಟಿಕೆಟ್ ಕೌಂಟರ್​ ಬಳಿಯಿದ್ದ ಕ್ಯೂ ಲೆಕ್ಕಿಸದೆ, ಈ ಇಬ್ಬರು ಯುವಕರು ಮುನ್ನುಗ್ಗಲು ಯತ್ನಿಸಿದರು. ಇದನ್ನು ರೈಲ್ವೇ ಪೊಲೀಸ್​ ಪೇದೆ ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದು, ಅವಾಚ್ಯ ಶಬ್ದಗಳಿಂದ ಪೇದೆಯನ್ನು ನಿಂದಿಸಿದ್ದಾರೆ. ನಂತರ, ಮನಬಂದಂತೆ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಪೇದೆಯ ಹೆಸರು ಇನ್ನೂ ತಿಳಿದುಬಂದಿಲ್ಲ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا