Urdu   /   English   /   Nawayathi

ಬೇರೆಯವರ ಮಗು ರಕ್ಷಿಸಿ, ಹೆತ್ತ ಕಂದನನ್ನೇ ಕಳೆದುಕೊಂಡ ತಾಯಿ!

share with us

ಗುಂಟೂರು: 18 ಜೂನ್ 2019 (ಫಿಕ್ರೋಖಬರ್ ಸುದ್ದಿ) ನಾಲ್ಕು ವರ್ಷದ ಮಗು ನಿಂತಿರುವ ಟ್ರ್ಯಾಕ್ಟರ್ ಹತ್ತಿ ಅದಕ್ಕಿರುವ ಕೀ ತಿರುಗಿಸಿದ್ದಾನೆ. ಬಳಿಕ ಟ್ರ್ಯಾಕ್ಟರ್​ ಮುಂದಕ್ಕೆ ಚಲಾಯಿಸಿದ್ದು, ಅಲ್ಲೆ ಆಡುತ್ತಿದ್ದ ಮಗುವಿನ ಮೇಲೆ ಹರಿದು ದುರಂತ ಸಂಭವಿಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ನಡೆದಿದೆ. ಹೌದು, ಮೂವರು ಮಕ್ಕಳು (4,3, ಒಂದೂವರೆ ವರ್ಷ) ಮನೆಯಂಗಳದಲ್ಲಿ ಆಟವಾಡುತ್ತಿದ್ದರು. ಟ್ರ್ಯಾಕ್ಟರ್​ ಚಾಲಕ ಮರೆತು ಕೀ ಬಿಟ್ಟು ಹೋಗಿದ್ದಾನೆ. ಮಕ್ಕಳು ಆಟವಾಡುತ್ತಾ ಟ್ರ್ಯಾಕ್ಟರ್​ ಬಳಿ ಬಂದಿದ್ದಾರೆ. ಇದರಲ್ಲಿ ನಾಲ್ಕು ವರ್ಷದ ಬಾಲಕ ಟ್ರ್ಯಾಕ್ಟರ್​ನ್ನು ಹತ್ತಿ ಕೀ ತಿರುವಿದ್ದು, ಟ್ರ್ಯಾಕ್ಟರ್​ ಗೇರ್​ನಲ್ಲಿದ್ದ ಕಾರಣ ಮುಂದಕ್ಕೆ ಹೋಗಿದೆ. ಮಕ್ಕಳು ಟ್ರ್ಯಾಕ್ಟರ್​ ಮುಂದೆಯೇ ಆಡುತ್ತಿದ್ದರಿಂದ 18 ತಿಂಗಳ ಮಗುವಿನ ಮೇಲೆ ಹರಿದಿದೆ. ಅದೇ ಸಮಯಕ್ಕೆ 18 ತಿಂಗಳ ಮಗುವಿನ ತಾಯಿ ಮಕ್ಕಳು ಆಟವಾಡುತ್ತಿರುವ ಸ್ಥಳಕ್ಕೆ ಹೋಗಿದ್ದಾರೆ. ಇನ್ನು ಟ್ರ್ಯಾಕ್ಟರ್​ ಮೇಲೆ ಕುಳಿತ್ತಿರುವ ಚೀರುತ್ತಿರುವುದನ್ನು ಗಮನಿಸಿದ ಆ ತಾಯಿ ಕೂಡಲೇ ಆ ಮಗುವನ್ನು ಕಾಪಾಡಿದ್ದಾರೆ. ಬಳಿಕ ಟ್ರ್ಯಾಕ್ಟರ್​ ಮರಕ್ಕೆ ಡಿಕ್ಕಿ ಹೊಡೆದು ನಿಂತುಕೊಂಡಿದೆ. ಆ ಮಗುವನ್ನು ಕಾಪಾಡಿದ ತಾಯಿ ಹಿಂದುರುಗಿ ನೋಡಿದಾಗ ತನ್ನ ಹೆತ್ತ ಮಗು ಮೃತಪಟ್ಟಿರುವುದನ್ನು ನೋಡಿದ್ದಾರೆ. ಬಳಿಕ ತನ್ನ ಮಡಿಲಲ್ಲಿ ತೆಗೆದುಕೊಂಡು ರೋಧಿಸಿದ್ದಾರೆ. ಈ ದೃಶ್ಯ ಎಲ್ಲರ ಕಣ್ಣಿನಂಚಲ್ಲಿ ನೀರು ತರಿಸಿದೆ. ಈ ಘಟನೆ ಕುರಿತು ತೆನಾಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا