Urdu   /   English   /   Nawayathi

ಅವನೂ ಮನುಷ್ಯನಲ್ವಾ.. ಪೊಲೀಸರಾ ಇಲ್ಲ ಗೂಂಡಾಗಳಾ.. ಮಾನವೀಯತೆ ಬೇಡವಾ..

share with us

ನವದೆಹಲಿ: 18 ಜೂನ್ 2019 (ಫಿಕ್ರೋಖಬರ್ ಸುದ್ದಿ) ಪೊಲೀಸ್‌ ವಾಹನಕ್ಕೆ ಆಟೋ ಡಿಕ್ಕಿ ಹೊಡೀತು ಎಂದು ಆರೋಪಿಸಿ ಮಾನವೀಯತೆ ಮರೆತು ಸಿಖ್‌ ಆಟೋ ಡ್ರೈವರ್‌ ಮೇಲೆ ಹಲ್ಲೆ ಮಾಡಿದ್ದ ನವದೆಹಲಿಯ ಮುಖರ್ಜಿನಗರ ಪೊಲೀಸ್‌ ಠಾಣೆಯ ಮೂವರು ಪೊಲೀಸರು ಅಮಾನತಾಗಿದ್ದಾರೆ. ಸಿಖ್‌ ಆಟೋ ಡ್ರೈವರ್‌ ಮತ್ತು ಆತನ ಮಗನ ಮೇಲೆ ಲಾಠಿಯಿಂದ ಅಮಾನವೀಯವಾಗಿ ಹಲ್ಲೆ ಮಾಡಿದ್ದ ಮೂವರು ಪೊಲೀಸ್ ಪೇದೆಗಳನ್ನ ನಾರ್ತ್‌ವೆಸ್ಟ್‌ ಡಿಸಿಪಿ ವಿಜಯಂತಾ ಆರ್ಯಾ ಸಸ್ಪೆಂಡ್ ಮಾಡಿದ್ದಾರೆ.

Cops Suspended

ಅಮಾನತು ಆದೇಶ

ಅಷ್ಟಕ್ಕೂ ಅವತ್ತು ಆಗಿದ್ದಾದರೂ ಏನು?:

2 ದಿನ ಹಿಂದೆ ನವದೆಹಲಿಯ ಮುಖರ್ಜಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಒಂದು ಘಟನೆ ನಡೆದಿತ್ತು. ಸಿಖ್‌ ಡ್ರೈವರ್‌ ಗ್ರಾಮೀಣ ಸೇವಾ ಟೆಂಪೋ ಹೆಸರಿನ ಆಟೋವೊಂದನ್ನ ಯದ್ವಾತದ್ವಾ ಚಲಾಯಿಸುತ್ತಿದ್ದನಂತೆ. ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಲ್ಲದೇ, ಪೊಲೀಸ್‌ ಪೇದೆಯ ಕಾಲಿಗೂ ಇದರಿಂದ ಗಾಯವಾಗಿತ್ತಂತೆ. ಇದನ್ನ ಪ್ರಶ್ನಿಸಿದ್ರೇ, ಸಿಖ್‌ ಆಟೋ ಡ್ರೈವರ್‌, ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಅಂತಾ ಪೊಲೀಸ್ ಅಧಿಕಾರಿಗಳು ಆರೋಪಿಸಿದ್ದರು.

ಸೋಷಿಯಲ್‌ ಮೀಡಿಯಾದಲ್ಲೂ ಖಾಕಿ ವಿರುದ್ಧ ಕಿಡಿ!

ಇದಾದ ಮೇಲೆ ಪೊಲೀಸರೆಲ್ಲ ಸೇರಿ ರಸ್ತೆ ಮಧ್ಯೆಯೇ ಅಟ್ಟಾಡಿಸಿಕೊಂಡು ಆಟೋ ಡ್ರೈವರ್‌ ಮತ್ತು ಆತನ ಮಗನ ಮೇಲೆ ಹಲ್ಲೆ ಮಾಡಿದ್ದರು.ಲಾಠಿಯಿಂದ ಯರ್ರಾಬಿರ್ರೀ ಭಾರಿಸಿದ್ದರು. 6 ರಿಂದ 8 ಪೊಲೀಸ್‌ ಪೇದೆಗಳು ಬೂಟುಗಾಲಿನಿಂದ ಕೆಳಗೆ ಹಾಕಿ ಒದ್ದಿದ್ದರು. ರಾಜಧಾನಿಯಲ್ಲೇ ನಡೆದಿದ್ದ ಈ ಘನಘೋರ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಇದನ್ನ ಪ್ರತ್ಯಕ್ಷದರ್ಶಿಗಳು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. ಪೊಲೀಸರ ಗೂಂಡಾಗಿರಿ ವರ್ತನೆಯನ್ನ ಖಂಡಿಸಿ ಸಿಖ್‌ ಸಮುದಾಯ ಪ್ರತಿಭಟನೆ ನಡೆಸಿತ್ತು. ಪೊಲೀಸರ ವಿರುದ್ಧ ಕ್ರಮಕೈಗೊಳ್ಬೇಕು ಅಂತಾ ಪಟ್ಟು ಹಿಡಿದಿತ್ತು. ಇದಲ್ಲದೇ ಸೋಷಿಯಲ್ ಮೀಡಿಯಾದಲ್ಲೂ ಪೊಲೀಸರ ಅಮಾನವೀಯ ಕೃತ್ಯಕ್ಕೆ ಸಾಕಷ್ಟು ಖಂಡನೆ ವ್ಯಕ್ತವಾಗಿತ್ತು. ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು ನೆಟಿಜನ್ಸ್‌. ಇದರಿಂದ ಎಚ್ಚೆತ್ತ ಹಿರಿಯ ಪೊಲೀಸರ ಅಧಿಕಾರಿಗಳು ಗೂಂಡಾ ವರ್ತನೆ ತೋರಿದ್ದ ಮೂವರು ಪೊಲೀಸ್ ಪೇದೆಗಳನ್ನ ಅಮಾನತುಗೊಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا