Urdu   /   English   /   Nawayathi

ವಿಮಾನ ಪ್ರಯಾಣ ಪ್ಲಾನ್ ಇದ್ರೆ.. ಈಗಲೇ ಕೈಬಿಡಿ: 400 ಫ್ಲೈಟ್​​ಗಳಲ್ಲಿ ವ್ಯತ್ಯಯ ಏಕೆ ಗೊತ್ತೆ?

share with us

ನವದೆಹಲಿ: 13 ಜೂನ್ 2019 (ಫಿಕ್ರೋಖಬರ್ ಸುದ್ದಿ) ಪಶ್ಚಿಮ ಕರಾವಳಿ ತೀರದ ಕಚ್​ನಿಂದ ಕೇರಳವರೆಗೂ ವಾಯುಭಾರ ಕುಸಿತದಿಂದ ಚಂಡಮಾರುತ ಅಪ್ಪಳಿಸಲಿದ್ದು, ಸುಮಾರು 400 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ- ಗುಜರಾತ್​ ವ್ಯಾಪ್ತಿಯ ವಿಮಾನ ನಿಲ್ದಾಣಗಳಲ್ಲಿ ನಿತ್ಯ ಸುಮಾರು 900 ವಿಮಾಗಳನು ಹಾರಾಟ ನಡೆಸುತ್ತವೆ. ಚಂಡಮಾರುತದಿಂದ ಉಂಟಾಗಲಿರುವ ಹವಾಮಾನ ಬದಲಾವಣೆಗೆ ಮುಂಬೈ ಏರ್​ಫೋರ್ಟ್​ನಲ್ಲಿ ಹಾರಾಡಲಿರುವ 194 ವಿಮಾನಗಳ ಪೈಕಿ 192 ವಿಮಾನಗಳು ವಿಳಂಬವಾಗಿ ಹಾರಾಟ ನಡೆಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುಜರಾತ್ ರಾಜ್ಯ ಸರ್ಕಾರ ಸಮುದ್ರ ತೀರದಲ್ಲಿನ ಸುಮಾರು 1.6 ಲಕ್ಷ ಜನರನ್ನು ಸುರಕ್ಷತೆ ದೃಷ್ಟಿಯಿಂದ ಬೇರೆಕಡೆ ಸ್ಥಳಾಂತರಿಸಿದೆ. 3 ಲಕ್ಷದಷ್ಟು ಜನರು ಚಂಡಮಾರುತದ ಭೀಕರತಗೆ ತುತ್ತಾಗಲಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا