Urdu   /   English   /   Nawayathi

AN-32 ವಿಮಾನದಲ್ಲಿದ್ದ 13 ಮಂದಿ ಮೃತ: ದುರ್ಘಟನೆಯಲ್ಲಿ ಯಾರೂ ಬದುಕುಳಿಯಲಿಲ್ಲ

share with us

ನವದೆಹಲಿ: 13 ಜೂನ್ 2019 (ಫಿಕ್ರೋಖಬರ್ ಸುದ್ದಿ) ವಾರದ ಹಿಂದೆ ನಾಪತ್ತೆಯಾಗಿದ್ದ AN-32 ವಿಮಾನದ ಅವಶೇಷ ಪತ್ತೆ ಮಾಡಿರುವ ಭಾರತೀಯ ವಾಯುಪಡೆ, ಅವಘಡದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಅಧಿಕೃತವಾಗಿ ಪ್ರಕಟಿಸಿದೆ. ವಿಮಾನದಲ್ಲಿದ್ದ 13 ಮಂದಿಯ ಮೃತದೇಹಗಳನ್ನು ಹಾಗೂ ಬ್ಲಾಕ್​ ಬಾಕ್ಸ್​ ಅನ್ನು ವಾಯುಪಡೆ ವಶಕ್ಕೆ ಪಡೆದಿದೆ. ಕಾರ್ಯಾಚರಣೆಯಲ್ಲಿ ಬದುಕುಳಿದ ಯಾರೊಬ್ಬರನ್ನೂ ನಾವು ಪತ್ತೆ ಮಾಡಲಾಗಲಿಲ್ಲ. ಈ ಬಗ್ಗೆ ವಿಮಾನದಲ್ಲಿದ್ದ 13 ಮಂದಿಯ ಕುಟುಂಬಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದೆ.

8 ಮಂದಿಯ ರಕ್ಷಣಾ ತಂಡ ಇಂದು ವಿಮಾನ ಅಪಘಾತಕ್ಕೊಳಗಾದ ಪ್ರದೇಶ ತಲುಪಿತ್ತು.

ದುರ್ಘಟನೆಯಲ್ಲಿ ವಿಂಗ್​ ಕಮಾಂಡರ್​ ಜಿ.ಎಂ ಚಾರ್ಲ್ಸ್​, ಸ್ಕ್ವಾಡ್ರನ್‌​ ಲೀಡರ್‌​ ಹೆಚ್​. ವಿನೋದ್​, ಫ್ಲೈಟ್​ ಲೆಫ್ಟಿನೆಂಟ್​ ಆರ್. ತಾಪ, ಎ. ತನ್ವರ್​, ಎಸ್​, ಮೊಹಂತಿ, ಎಂ.ಕೆ ಜಾರ್ಜ್,​ ವಾರಂಟ್​ ಆಫೀಸರ್​ ಕೆ.ಕೆ. ಮಿಶ್ರ, ಸರ್ಜೆಂಟ್​ ಅನೂಪ್ ಕುಮಾರ್​, ಕಾರ್ಪೊರಲ್ ಶೆರೈನ್​, ಲೀಡ್​​ ಏರ್​ಕ್ರಾಫ್ಟ್​ ಮನ್​ ಎಸ್​.ಕೆ. ಸಿಂಗ್​, ಪಂಕಜ್​, ನಾನ್​ ಕಾಂಬಾಟೆಂಟ್​ ಪುಟಾಲಿ ಹಾಗೂ ರಾಜೇಶ್​ ಕುಮಾರ್ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ. ಘಟನೆಯಲ್ಲಿ ಮೃತಪಟ್ಟ ವಾಯುಪಡೆ ಸಿಬ್ಬಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ವಿಮಾನದಲ್ಲಿ ನಾಪತ್ತೆಯಾಗಿದ್ದ ವಾಯುಪಡೆ ಯೋಧರು ಸುರಕ್ಷಿತವಾಗಿ ವಾಪಸ್ಸಾಗುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಇಂದು ಅವರೆಲ್ಲ ಮೃತಪಟ್ಟಿದ್ದಾರೆ ಎಂದು ಕೇಳಿ ದುಃಖವಾಗಿದೆ ಎಂದು ರಾಹುಲ್ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಭವಿಸಿದ್ದು ಹೇಗೆ?

ಜೂನ್ 3ರಂದು ಅಸ್ಸೋಂನ ಜೊರ್ಹಾತ್​ನಿಂದ ಹೊರಟಿದ್ದ ವಾಯುಸೇನೆಯ ವಿಮಾನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ವಾರಗಟ್ಟಲೆ ವಿಮಾನ ಪತ್ತೆಕಾರ್ಯ ನಡೆಸಿದರೂ ಪ್ರತಿಕೂಲ ವಾತಾವರದಿಂದಾಗಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಮಂಗಳವಾರ 12,000 ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಕಂಡುಬಂದವು. ದಟ್ಟಮೋಡಗಳಿಂದ ಮಾರ್ಗ ಗೋಚರಿಸದೆ ವಿಮಾನ, ಪರ್ವತಕ್ಕೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿತ್ತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا