Urdu   /   English   /   Nawayathi

ಕಾಡಿನಿಂದ ನಾಡಿಗೆ ಬಂದ ಚಿರತೆ: ಭಯಬಿದ್ದ ಜನ.. ರಕ್ಷಣೆಗಾಗಿ ಅರಣ್ಯ ಇಲಾಖೆಗೆ ಮನವಿ

share with us

ರಾಮನಗರ: 11 ಜೂನ್ 2019 (ಫಿಕ್ರೋಖಬರ್ ಸುದ್ದಿ) ನಗರದ ಹೃದಯ ಭಾಗದಲ್ಲಿರುವ ಹಳೇ ಬಸ್‌ ನಿಲ್ದಾಣದ ಬಳಿ ಚಿರತೆ ಕಾಣಿಸಿಕೊಂಡಿದ್ದು, ಸಾಕುನಾಯಿಯೊಂದನ್ನು ಕೊಂದು ಹಾಕಿದೆ ಎಂದು ಸ್ಥಳೀಯರು ದೂರು ನೀಡಿದ್ದಾರೆ. ಹಳೇ ಬಸ್ ನಿಲ್ದಾಣದ ಬಳಿಯ ಡಾ.ಎಸ್.ಎಲ್. ತಿಮ್ಮಯ್ಯ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿರುವ ಮನೆಯ ಆವರಣದಲ್ಲಿ ಮುಂಜಾನೆ ನಾಲ್ಕರ ಸುಮಾರಿಗೆ ಚಿರತೆ ಕಾಣಿಸಿಕೊಂಡಿದ್ದು, ನಮ್ಮ ಸಾಕುನಾಯಿಯನ್ನು ಕೊಂದುಹಾಕಿದೆ ಎಂದು ದೇಸಿಗೌಡ ಎಂಬುವರು ಅರಣ್ಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮುಂಜಾನೆ ಸಾಕು ನಾಯಿಗಳು ಬೊಗಳಲು ಆರಂಭಿಸಿದವು. ನಾವು ಬೀದಿ ನಾಯಿಗಳು ಇರಬಹುದು ಎಂದು ಸುಮ್ಮನಾಗಿದ್ದೆವು. ಬೊಗಳಾಟ ಹೆಚ್ಚಾದಾಗ ಹೊರಗೆ ಬಂದು ನೋಡಿದರೆ ಒಂದು ನಾಯಿ ಸತ್ತು ಬಿದ್ದಿತ್ತು. ಬೋನಿನಲ್ಲಿದ್ದ ಮತ್ತೊಂದು ನಾಯಿ ಬೊಗಳುತ್ತಲಿತ್ತು. ಟಾರ್ಚ್ ಬೆಳಕು ಹಾಯಿಸಿದಾಗ ಚಿರತೆ ಕಣ್ಣಿಗೆ ಬಿತ್ತು. ಕೂಡಲೇ ನಾವು ಮನೆ ಒಳಗೆ ಹೋಗಿ ಸದ್ದು ಮಾಡಿದೆವು. ಚಿರತೆ ಕೆಲಹೊತ್ತು ಅಲ್ಲಿಯೇ ಇದ್ದು ನಂತರ ಪರಾರಿಯಾಯಿತು’ ಎಂದು ದೇಸಿಗೌಡ ತಿಳಿಸಿದರು. ನಮ್ಮ ಮನೆಯ ಹೊರಗೆ ಹಸು ಕಟ್ಟಿದ್ದು, ಅದನ್ನು ಹಿಡಿಯಲು ಚಿರತೆ ಬಂದಿರಬಹುದು. ಅದರ ಹೆಜ್ಜೆ ಗುರುತುಗಳು ಅಂಗಳದಲ್ಲಿದೆ. ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ದೂರಿನ ಮೇರೆಗೆ ದೇಸಿಗೌಡರ ಮನೆ ಬಳಿ ಬೋನ್ ಇಡಲಾಗಿದೆ. ಅರ್ಕಾವತಿ ನದಿ ದಡದಲ್ಲಿ ಮನೆ ಇದ್ದು, ನದಿ ಪಾತ್ರದಲ್ಲಿರುವ ಜೊಂಡಿನ ಕಡೆಯಿಂದ ಚಿರತೆ ಬಂದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಶ್ರೀರಾಮ ದೇವರ ಬೆಟ್ಟ ಸೇರಿದಂತೆ ಸುತ್ತಲು ಇರುವ ಅರಣ್ಯ ಪ್ರದೇಶದಿಂದ ಚಿರತೆ ಬಂದಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ದಾಳಿ ಮಾಡುತ್ತಿದ್ದ ಚಿರತೆ ಇದೀಗ ನಗರದ ಹೃದಯ ಭಾಗದಲ್ಲಿ ಕಾಣಿಸಿಕೊಂಡಿವುದು ಆತಂಕಕ್ಕೆ ಕಾರಣವಾಗಿದ್ದು ಕೂಡಲೇ ಅರಣ್ಯ ಇಲಾಖೆ‌ ಕ್ರಮ‌ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ, ಇ ವರದಿ 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا