Urdu   /   English   /   Nawayathi

ಸತತ 110 ಗಂಟೆಗಳ ಕಾರ್ಯಾಚರಣೆ ವ್ಯರ್ಥ, ಕೊಳವೆ ಬಾವಿಯಿಂದ ಬದುಕಿ ಬರಲಿಲ್ಲ ಮಗು

share with us

ಸಂಗ್ರೂರ್: 11 ಜೂನ್ 2019 (ಫಿಕ್ರೋಖಬರ್ ಸುದ್ದಿ) ಪಂಜಾಬ್ ಸಂಗ್ರೂರ್ ಜಿಲ್ಲೆಯ ಭಗವಾನ್‍ಪುರ್ ಗ್ರಾಮದಲ್ಲಿ ಜೂ.6ರಂದು ಕೊಳವೆ ಬಾವಿಗೆ ಬಿದ್ದಿದ್ದ ಫತೇಹಿರ್ ಸಿಂಗ್ (3) ಎಂಬ ಬಾಲಕನನ್ನು ಸತತ 110 ಗಂಟೆಗಳ ಕಾರ್ಯಾಚರಣೆ ಬಳಿಕ ಹೊರ ತೆಗೆಯಲಾಯಿತಾದರೂ ಆತ ಬದುಕುಳಿಯಲಿಲ್ಲ. ಜನ್ಮ ದಿನಾಚರಣೆ ದಿನವೇ ಮಗು ದುರಂತ ಸಾವಿಗೀಡಾಗಿರುವುದು ಶೋಚನೀಯ ಸಂಗತಿ. ಗುರುವಾರ ಸಂಜೆ 4 ಗಂಟೆ ಸುಮಾರಿನಲ್ಲಿ ಆಟ ಆಡುವಾಡುತ್ತಿದ್ದ ಮಗು ಸುಮಾರು 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳೀಯರು ಹಾಗೂ ಪೊಲೀಸರ ಸಹಕಾರದಿಂದ ಸತತ 110 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಇಂದು ಮುಂಜಾನೆ 5.12ರಲ್ಲಿ ಬಾಲಕ ಸಿಂಗ್‍ನನ್ನು ಹೊರ ತೆಗೆದರು. ಸಂಪೂರ್ಣ ಪ್ರಜ್ಞಾಶೂನ್ಯನಾಗಿದ್ದ ಬಾಲಕನನ್ನು ಆ್ಯಂಬುಲೆನ್ಸ್‍ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಗು ಕೆಲವು ಗಂಟೆಗಳ ಹಿಂದೆಯೇ ಮೃತಪಟ್ಟಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು. ಈ ದುರಂತದ ಬಗ್ಗೆ ಜಿಲ್ಲಾಧಿಕಾರಿ ಘನಶ್ಯಾಮ್ ದಿಗ್ಭ್ರಮೆ ಗೊಂಡಿದ್ದಾರೆ. ಸೋಮವಾರವಷ್ಟೇ ಫತೇಹಿರ್ ಸಿಂಗ್‍ಗೆ ಮೂರು ವರ್ಷ ತುಂಬಿತ್ತು. ಜನ್ಮ ದಿನದಂದೇ ಬಾಲಕ ಮೃತಪಟ್ಟಿರುವುದು ದುರದೃಷ್ಟ ಸಂಗತಿ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا