Urdu   /   English   /   Nawayathi

ವಾಟ್ಸಾಪ್ ದೋಷವನ್ನು ಪತ್ತೆಹಚ್ಚಿದ ಮಣಿಪುರದ ಯುವಕ; ಫೇಸ್ ಬುಕ್ ಸಂಸ್ಥೆಯಿಂದ ಹಣ, ಗೌರವ

share with us

ಇಂಫಾಲ್: 11 ಜೂನ್ 2019 (ಫಿಕ್ರೋಖಬರ್ ಸುದ್ದಿ) ಬಳಕೆದಾರರ ಖಾಸಗೀತನಕ್ಕೆ ಧಕ್ಕೆಯನ್ನುಂಟುಮಾಡುತ್ತಿದ್ದ ವಾಟ್ಸಾಪ್ನಲ್ಲಿನ ದೋಷವನ್ನು ಕಂಡುಹಿಡಿದ ಮಣಿಪುರದ ಯುವಕನೊಬ್ಬನಿಗೆ ಫೇಸ್ ಬುಕ್ ಗೌರವ ನೀಡಿದೆ. ಮಣಿಪುರದ 22 ವರ್ಷದ ಎಂಜಿನಿಯರ್ ಝೋನೆಲ್ ಸೌಜಿಜಮ್ ಅವರಿಗೆ ಫೇಸ್ ಬುಕ್ ಸಂಸ್ಥೆ 5 ಸಾವಿರ ಅಮೆರಿಕನ್ ಡಾಲರ್ ನೀಡಿ ಗೌರವಿಸಿದ್ದು ಫೇಸ್ ಬುಕ್ ಹಾಲ್ ಆಫ್ ಫೇಮ್ 2019ರಲ್ಲಿ ಅವರ ಹೆಸರನ್ನು ಸೇರಿಸಿದೆ. ಈ ವರ್ಷದ ಫೇಸ್ ಬುಕ್ ಹಾಲ್ ಆಫ್ ಫೇಮ್ನಲ್ಲಿ 94 ಜನರ ಪಟ್ಟಿಯಲ್ಲಿ ಸೌಜಿಜಮ್ ಅವರ ಹೆಸರು 16ನೇ ಸ್ಥಾನದಲ್ಲಿದೆ. ವಾಟ್ಸಾಪ್ನಲ್ಲಿ ವಾಯ್ಸ್ ಕಾಲ್ ಮಾಡುವಾಗ ಕರೆ ಮಾಡಿದವರು ಕರೆ ಸ್ವೀಕರಿಸಿದವರ ಗಮನಕ್ಕೆ ಬಾರದೆ ಅಥವಾ ಅವರ ಅನುಮತಿ ಪಡೆಯದೆ ವಿಡಿಯೊ ಕಾಲ್ಗೆ ಮೇಲ್ದರ್ಜೆಗೇರಿಸುವಂತಹ ದೋಷವನ್ನು ಸೌಜಿಜಮ್ ವಾಟ್ಸಾಪ್ನಲ್ಲಿ ಕಂಡುಹಿಡಿದಿದ್ದರು. ಕರೆ ಸ್ವೀಕರಿಸುವವರಿಗೆ ಗೊತ್ತಾಗದೆ ವಾಯ್ಸ್ ಕಾಲ್ ವಿಡಿಯೊ ಕಾಲ್ಗೆ ಹೋದರೆ ಕರೆ ಸ್ವೀಕರಿಸಿದವನು ಏನು ಮಾಡುತ್ತಿದ್ದಾನೆ ಎಂದು ಗೊತ್ತಾಗುತ್ತದೆ, ಇದರಿಂದ ಖಾಸಗೀತನಕ್ಕೆ ಧಕ್ಕೆಯುಂಟಾಗುತ್ತದೆ ಎನ್ನುತ್ತಾರೆ ಸೌಜಿಜಮ್. ಈ ವಿಚಾರ ಗೊತ್ತಾದ ಕೂಡಲೇ ಸೌಜಿಜಮ್ ಫೇಸ್ ಬುಕ್ನ ಬಗ್ ಬೌಂಟಿ ಪ್ರೊಗ್ರೆಮ್ಗೆ ಕಳೆದ ಮಾರ್ಚ್ನಲ್ಲಿ ತಿಳಿಸಿದ್ದರು. ಫೇಸ್ ಬುಕ್ ನ ತಾಂತ್ರಿಕ ತಂಡ 15-20 ದಿನಗಳಲ್ಲಿ ದೋಷವನ್ನು ಬಗೆಹರಿಸಿತು. ಮಾರ್ಕ್ ಝುಕರ್ ಬರ್ಗ್ ಮಾಲೀಕತ್ವದ ಫೇಸ್ ಬುಕ್ ವಾಟ್ಸಾಪ್ ನ್ನು 2014ರ ಫೆಬ್ರವರಿಯಲ್ಲಿ 19 ಶತಕೋಟಿ ಡಾಲರ್ ಗೆ ಖರೀದಿಸಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا