Urdu   /   English   /   Nawayathi

ಒಂದಲ್ಲ, ಎರಡಲ್ಲ ಎಲ್ಲ ವಿಷಯಗಳಲ್ಲಿ 35 ಅಂಕ...10ನೇ ತರಗತಿ ವಿದ್ಯಾರ್ಥಿನಿಯ ಹಿಗೊಂದು ಸಾಧನೆ!

share with us

ಸಾಂಗ್ಲಿ(ಮಹಾರಾಷ್ಟ್ರ): 10 ಜೂನ್ 2019 (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರದ 10ನೇ ತರಗತಿ ಬೋರ್ಡ್​ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಒಬ್ಬಳು ಎಲ್ಲ ವಿಷಯಗಳಲ್ಲೂ 100ಕ್ಕೆ 35 ಅಂಕ ಪಡೆದುಕೊಂಡು ಅಪರೂಪವಾಗಿ ಪಾಸ್​ ಆಗಿರುವ ಘಟನೆ ನಡೆದಿದೆ. ಸಾಕ್ಷಿ ರಜಪೂತ್​ ಮಹಾರಾಷ್ಟ್ರದ ಸಾಂಗ್ಲಿದವಳಾಗಿದ್ದು, ಎಲ್ಲ ವಿಷಯಗಳಲ್ಲಿ 35 ಅಂಕ ಪಡೆದುಕೊಂಡಿದ್ದಾಳೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಕೆ, ಪ್ರತಿಯೊಂದು ವಿಷಯದಲ್ಲೂ ಮ್ಯಾಜಿಕ್​ ನಂಬರ್​ ಪಡೆದುಕೊಂಡು ಪಾಸ್​​ ಆಗಿರುವುದು ಆಶ್ಚರ್ಯ ನೀಡಿದೆ. ಹೊಸ ಪಠ್ಯಕ್ರಮ ತುಂಬಾ ಕಠಿಣವಾಗಿದ್ದರಿಂದ ಪರೀಕ್ಷೆ ಸರಿಯಾಗಿ ಬರೆಯಲು ಆಗಿರಲಿಲ್ಲ. ಆದರೆ ಪಾಸ್​ ಆಗಿರುವುದು ಖುಷಿ ನೀಡಿದೆ ಎಂದಿದ್ದಾಳೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸರಿಯಾಗಿ ಅಧ್ಯಯನ ಮಾಡಿ, ಉತ್ತಮ ಅಂಕ ಪಡೆದುಕೊಳ್ಳುವ ಪ್ರಯತ್ನ ಮಾಡುವೆ ಎಂದಿದ್ದಾಳೆ. ಇನ್ನು ಈ ವಿದ್ಯಾರ್ಥಿನಿ ಎಲ್ಲ ವಿಷಯಗಳಲ್ಲೂ 35 ಅಂಕ ಪಡೆದುಕೊಳ್ಳುತ್ತಿದ್ದಂತೆ ವಿವಿಧ ಮಾಧ್ಯಮಗಳು ಈಕೆಯ ಸಂದರ್ಶನ ಸಹ ನಡೆಸಿವೆ ಎಂದು ತಿಳಿದು ಬಂದಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا