Urdu   /   English   /   Nawayathi

7 ವರ್ಷದ ಬಾಲಕಿ ಜೀವ ಉಳಿಸುವುದಕ್ಕಾಗಿ ರಕ್ತದಾನ ಮಾಡಲು ರಂಜಾನ್ ಉಪವಾಸ ತ್ಯಜಿಸಿದ ಯುವಕ!

share with us

ಇಂಡೋ-ಬಾಂಗ್ಲಾದೇಶ: 03 ಜೂನ್ 2019 (ಫಿಕ್ರೋಖಬರ್ ಸುದ್ದಿ) 7 ವರ್ಷದ ಬಾಲಕಿಯ ಜೀವ ಉಳಿಸುವುದಕ್ಕಾಗಿ ರಂಜಾನ್ ಉಪವಾಸವನ್ನು ತ್ಯಜಿಸಿ ಯುವನೋರ್ವ ರಕ್ತದಾನ ಮಾಡಿದ್ದಾನೆ. ಥಲಸ್ಸೆಮಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ರಕ್ತದ ಅಗತ್ಯವಿತ್ತು. ಈ ಬಾಲಕಿ ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ವಾಸಿಸುತ್ತಿದ್ದರು. ಈ ಪ್ರದೇಶದಲ್ಲಿ ಅತಿಯಾದ ಮತ ಧ್ರುವೀಕರಣವಿದ್ದು, ಲೋಕಸಭಾ ಚುನಾವಣೆಯಲ್ಲಿಯೂ ಇದು ಸ್ಪಷ್ಟವಾಗಿತ್ತು. 7 ವರ್ಷದ ಬಾಲಕಿಗೆ A-positive ರಕ್ತದ ತುರ್ತು ಅವಶ್ಯಕತೆ ಇದೆ ಎಂದು ತಿಳಿದ ಬೆನ್ನಲ್ಲೇ ಒಸ್ಮಾನ್ಗನಿ ಶೇಖ್ ಎಂಬ ಯುವಕ ಹಿಂದೆ ಮುಂದೆ ನೋಡದೇ ರಕ್ತದಾನ ಮಾಡಲು ರಂಜಾನ್ ಉಪವಾಸವನ್ನು ತ್ಯಜಿಸಿದ್ದಾನೆ. ಒಸ್ಮಾನ್ ಗನಿ ಶೇಖ್ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ ಬ್ಲಡ್ ಡೋನರ್ ಎಂದು ಗುರುತಿಸಿಕೊಂಡಿದ್ದ. ಇದನ್ನು ನೋಡಿದ ಬಾಲಕಿಯ ತಂದೆ ಗನಿಗೆ ಕರೆ ಮಾಡಿದ್ದಾರೆ. "ಕರೆ ಬಂದ ತಕ್ಷಣವೇ ನಾನು ಉಪವಾಸ ಅಂತ್ಯಗೊಳಿಸಿ ಬಾಲಕಿಗೆ ರಕ್ತ ನೀಡಲು ನಿರ್ಧರಿಸಿದೆ. 2016 ರಲ್ಲಿ ನಾನು ಸಂಬಂಧಿಕರೊಬ್ಬರಿಗೆ ರಕ್ತ ಕೊಡಿಸುವುದಕ್ಕೆ ಸಮಸ್ಯೆ ಎದುರಿಸಿದ್ದೆ. ಆಗಿನಿಂದ ನಾನು ರಕ್ತದಾನ ಮಾಡುವುದಕ್ಕೆ ನಿರ್ಧರಿಸಿದೆ ಎನ್ನುತ್ತಾರೆ ಸ್ನಾತಕೋತ್ತರ ಪದವೀಧರ ಗನಿ. ಮೀನು ಮಾರಾಟಗಾರ ಗೌತಮ್ ದಾಸ್ ನ ಒಬ್ಬಳೇ ಮಗಳು ರಾಖಿಗೆ ಕಳೆದ 3 ವರ್ಷಗಳಿಂದ ಥಲಸ್ಸೆಮಿಯಾ ಸಮಸ್ಯೆ ಇದೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ರಕ್ತ ಕೊಡಿಸುವ ತುರ್ತು ಅಗತ್ಯವಿದೆ ಎಂದು ಹೇಳಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا