Urdu   /   English   /   Nawayathi

ರಾಕ್ಷಸನ ಅಟ್ಟಹಾಸ... ತಾಯಿ ಮಡಿಲಲ್ಲಿ ಮಲಗಿದ್ದ ಮಗುವನ್ನೇ ಎಳೆದೊಯ್ದ ಚಿರತೆ!

share with us

ಚಂದ್ರಪೂರ: 03 ಜೂನ್ 2019 (ಫಿಕ್ರೋಖಬರ್ ಸುದ್ದಿ) ತಾಯಿಯ ಮಡಿಲಲ್ಲಿ ನಿದ್ರಿಸುತ್ತಿದ್ದ ಒಂಭತ್ತು ತಿಂಗಳ ಮಗುವನ್ನು ಚಿರತೆ ಎಳೆದೊಯ್ದು ತಿಂದು ಹಾಕಿರುವ ಘಟನೆ ಚಂದ್ರಪುರದ ಗಡಬೋರಿ ಎಂಬ ಗ್ರಾಮದಲ್ಲಿ ನಡೆದಿದೆ. ತಾಯಿಯ ಮಡಿಲಲ್ಲಿ ಮಗು ನಿದ್ರಿಸುತ್ತಿತ್ತು. ತಾಯಿ ನೀರು ಕುಡಿಯಲು ಒಳಗೆ ಹೋಗಿದ್ದಾಗ ಚಿರತೆ ಮಗುವನ್ನು ಎಳೆದೊಯ್ದಿದೆ. ಮಗು ಅಳುತ್ತಿರುವ ಶಬ್ದ ಕೇಳಿದ ತಾಯಿ-ತಂದೆ ಚಿರತೆ ಹಿಂದೆ ಓಡಿದ್ದಾರೆ. ಇನ್ನು ತಂದೆ-ತಾಯಿ ಸಮೇತ ಗ್ರಾಮವೇ ಮಗುವನ್ನು ಹುಡುಕಿದೆ. ಆದ್ರೂ ಮಗು ಪತ್ತೆಯಾಗಿರಲಿಲ್ಲ. ಈ ಕುರಿತು ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿತ್ತು. ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಮಗುವನ್ನು ಪತ್ತೆ ಹಚ್ಚಿದ್ದಾರೆ. ಮನೆಯಿಂದ ಅರ್ಧ ಕಿಲೋ ಮೀಟರ್​ ದೂರದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಇನ್ನು ಅರಣ್ಯಾಧಿಕಾರಿ -ಗಳು ಹಾಗೂ ಸಿಬ್ಬಂದಿ ಚಿರತೆ ಹಿಡಿಯುವ ಕಾರ್ಯಾಚರಣೆಗೆ ಇಳಿದಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا