Urdu   /   English   /   Nawayathi

ಇದ್ಲಿಬ್‌ ಮೇಲಿನ ಬಾಂಬ್‌ ದಾಳಿ ಕೂಡಲೇ ನಿಲ್ಲಿಸಿ: ಸಿರಿಯ, ರಶ್ಯಕ್ಕೆ ಟ್ರಂಪ್‌ ಕರೆ

share with us

ವಾಷಿಂಗ್ಟನ್‌: 03 ಜೂನ್ 2019 (ಫಿಕ್ರೋಖಬರ್ ಸುದ್ದಿ) ಜಿಹಾದಿಗಳ ಕೊನೆಯ ಭದ್ರಕೋಟೆಯಾಗಿರುವ ಸಿರಿಯದ ಇದ್ಲಿಬ್‌ ನ ಮೇಲೆ ಬಾಂಬ್‌ ದಾಳಿ ನಡೆಸುವುದನ್ನು ತತ್‌ಕ್ಷಣ ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಿರಿಯ ಮತ್ತು ರಶ್ಯಕ್ಕೆ ಕರೆ ನೀಡಿದ್ದಾರೆ. ‘ಸಿರಿಯ, ರಶ್ಯ ಮತ್ತು ಸ್ವಲ್ಪ ಮಟ್ಟಿಗೆ ಇರಾನ್‌ ಸೇರಿಕೊಂಡು ಸಿರಿಯದ ಇದ್ಲಿಬ್‌ ಪ್ರಾಂತ್ಯದ ಮೇಲೆ ಬೇಕಾಬಿಟ್ಟಿ ಬಾಂಬ್‌ ದಾಳಿ ನಡೆಸುತ್ತಿವೆ ಎಂದು ಕೇಳಿದ್ದೇನೆ; ಇದರಿಂದ ಅನೇಕ ಅಮಾಯಕರು ಸಾಯುತ್ತಿದ್ದಾರೆ. ಜಗತ್ತು ಈ ನರಮೇಧವನ್ನು ನೋಡುತ್ತಿದೆ. ಈ ರೀತಿಯ ಬಾಂಬ್‌ ದಾಳಿ ಮಾಡುವ ಮೂಲಕ ನೀವೇನು ಪಡೆಯುವಿರಿ? ಇದರ ಉದ್ದೇಶವೇನು? ತತ್‌ಕ್ಷಣ ಇದನ್ನು ನಿಲ್ಲಿಸಿ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ. ಸಿರಿಯ ಮತ್ತು ರಶ್ಯ ಇದ್ಲಿಬ್‌ ಮೇಲೆ ನಡೆಸುತ್ತಿರುವ ಬಾಂಬ್‌ ದಾಳಿಯನ್ನು ಅಂತಾರಾಷ್ಟ್ರೀಯ ಸಮುದಾಯ ನೋಡಿಯೂ ಸುಮ್ಮಗಿರುವುದು ದುರದೃಷ್ಟಕರ ಎಂದು ಸಿರಿಯದ ಎನ್‌ಜಿಓ ಕಳೆದ ಶುಕ್ರವಾರ ಹೇಳಿತ್ತು. ಸಿರಿಯ ಮತ್ತು ರಶ್ಯದ ಜಂಟಿ ಬಾಂಬ್‌ ದಾಳಿಯಿಂದಾಗಿ ವಾಯವ್ಯ ಸಿರಿಯದ ಸುಮಾರು 3 ಲಕ್ಷ ಜನರು ಬಲವಂತವಾಗಿ ಟರ್ಕಿ ಗಡಿಗೆ ದೂಡಲ್ಪಡುತ್ತಿದ್ದಾರೆ ಎಂದು ಎನ್‌ಜಿಓ ಹೇಳಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا