Urdu   /   English   /   Nawayathi

GST: ಕೇಂದ್ರದ ಬೊಕ್ಕಸಕ್ಕೆ ಹರಿದು ಬಂತು 1 ಲಕ್ಷ ಕೋಟಿ ರೂಪಾಯಿ!

share with us

ನವದೆಹಲಿ: 02 ಜೂನ್ 2019 (ಫಿಕ್ರೋಖಬರ್ ಸುದ್ದಿ) ಜಿಎಸ್​ಟಿ ಪರಿಚಯಿಸಿದ್ದ ಬಿಜೆಪಿ ಸರ್ಕಾರ ಮತ್ತೊಮ್ಮೆ ಕೇಂದ್ರ ಸರ್ಕಾರದ ಗದ್ದುಗೆ ಏರುತ್ತಿದ್ದಂತೆ ಮೇ ತಿಂಗಳ ತೆರಿಗೆ ಸಂಗ್ರಹದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ. ಈ ವರ್ಷದ ಮೇ ತಿಂಗಳೊಂದರಲ್ಲಿಯೇ ಜಿಎಸ್​ಟಿಯಿಂದ ಸಂಗ್ರಹವಾದ ಮೊತ್ತ 1 ಲಕ್ಷ ಕೋಟಿ ರೂ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ತಿಂಗಳಲ್ಲಿ 100,289 ಕೋಟಿ ರೂ ತೆರಿಗೆ ಸಂಗ್ರಹವಾಗಿದ್ದು, ಕಳೆದ ವರ್ಷದ ಮೇ ತಿಂಗಳಲ್ಲಿ 94,016 ಕೋಟಿ ಹರಿದುಬಂದಿತ್ತು. ಈ ಬಾರಿ ಶೇ 2.21ರಷ್ಟು ತೆರಿಗೆ ಮೊತ್ತ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರವು 17,811 ಕೋಟಿ ರೂ ತೆರಿಗೆ ಸಂಗ್ರಹಿಸಿದ್ದು, ರಾಜ್ಯ ಸರ್ಕಾರಗಳಿಂದ 24,462 ಕೋಟಿ ರೂ ಕ್ರೂಡೀಕರಣವಾಗಿದೆ. 49,891 ಕೋಟಿ ರೂ ಸಮಗ್ರ ಜಿಎಸ್​ಟಿ ಹಾಗೂ 8,125 ಕೋಟಿ ರೂ ಸೆಸ್​ ಸರ್ಕಾರಿ ಖಜಾನೆ ಸೇರಿದೆ. ಸರ್ಕಾರವು ಕೇಂದ್ರ ಜಿಎಸ್​ಟಿಗೆ 18,098 ಹಾಗೂ ರಾಜ್ಯ ಜಿಎಸ್​ಟಿ ಮೂಲಕ ಸಮಗ್ರ ಜಿಎಸ್​ಟಿಗೆ 14,438 ಕೋಟಿ ರೂಗಳನ್ನು ಚುಕ್ತಾ ಮಾಡಿದೆ.

ಈ, ಇ ವರದಿ

 

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا