Urdu   /   English   /   Nawayathi

ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಟೆಕ್ಕಿ ಆತ್ಮಹತ್ಯೆ!

share with us

ಬೆಂಗಳೂರು: 01 ಜೂನ್ 2019 (ಫಿಕ್ರೋಖಬರ್ ಸುದ್ದಿ) ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸಾಫ್ಟ್ ವೇರ್ ಉದ್ಯೋಗಿಯೋರ್ವ ತನ್ನ ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನಡೆದಿದ್ದು, ಮೃತ ಸಾಫ್ಟ್ ವೇರ್ ಉದ್ಯೋಗಿಯನ್ನು 34 ವರ್ಷದ ಕಾರ್ತಿಕ್ ಎಂದು ಗುರುತಿಸಲಾಗಿದೆ. ಮೃತ ಕಾರ್ತಿಕ್ ಫ್ರೇಜರ್ ಟೌನ್ ನಿವಾಸಿಯಾಗಿದ್ದು, ಮೂಲತಃ ತಮಿಳುನಾಡಿನ ಕಾರ್ತಿಕ್ ಶೆಟ್ಟಿ ಹಲವು ವರ್ಷಗಳಿಂದ ಕುಟುಂಬ ಸಮೇತ ನಗರದಲ್ಲಿ ನೆಲೆಸಿದ್ದರು. ಕಾರ್ತಿಕ್ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಲಸಕ್ಕೆಂದು ಮನೆಯಿಂದ ತಮ್ಮ ಕಾರಿನಲ್ಲಿ ತೆರೆಳಿದ್ದರು. ಆದರೆ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ, ಕರೆ ಮಾಡಿದರೂ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಎಂದು ಬರುತ್ತಿತ್ತು. ಇದರಿಂದ ಆತಂಕಗೊಂಡ ಆತನ ಪೋಷಕರು ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಬಾಗಲೂರಿನ ನಿರ್ಜನ ಪ್ರದೇಶವೊಂದರಲ್ಲಿ ಸ್ವಿಫ್ಟ್ ಕಾರೊಂದು ಶಂಕಾಸ್ಪದ ರೀತಿಯಲ್ಲಿ ನಿಂತಿರುವ ಮಾಹಿತಿ ಬಂದಿದೆ. ಈ ಕುರಿತು ಬಾಗಲೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬನ ಮೃತದೇಹವಿರುವುದು ಪತ್ತೆಯಾಗಿದೆ. ಪರಿಶೀಲನೆ ನಡೆಸಿದಾಗ ಕಾರ್ತಿಕ್ ಎಂಬುದೇ ಸ್ಪಷ್ಟವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಖಿನ್ನತೆ ಕಾರಣ!

ನಾಲ್ಕು ವರ್ಷಗಳ ಹಿಂದೆ ಕಾರ್ತಿಕ್‌ಗೆ ವಿವಾಹವಾಗಿದ್ದು, ಎರಡು ವರ್ಷದ ಮಗು ಇದೆ. ಕಾರ್ತಿಕ್ ಮಾನ್ಯತಾ ಟೆಕ್‌ಪಾರ್ಕ್ ನಲ್ಲಿರುವ ಸಾಫ್ಟ್‌ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದರು. ಕಾರ್ತಿಕ್ ಖಿನ್ನತೆಗೆ ಒಳಗಾಗಿದ್ದರು, ಗುರುವಾರ ಕಚೇರಿಗೆ ತೆರಳದೆ ಹೊಸಹಳ್ಳಿಯ ನಿರ್ಜನ ಪ್ರದೇಶಕ್ಕೆ ಬಂದಿದ್ದಾರೆ. ಕಾರಿನ ಗ್ಲಾಸು ಹಾಕಿಕೊಂಡು ಎರಡು ಲೀಟರ್ ಪ್ಲಾಸ್ಟಿಕ್ ಬಾಟಲಿಯಲ್ಲಿ ತಂದಿದ್ದ ಪೆಟ್ರೋಲ್‌ನ್ನು ಮೈ ಮೇಲೆ ಸುರಿದುಕೊಂಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا