Urdu   /   English   /   Nawayathi

'ಇಂದಿರಾ ಗಾಂಧಿ' ಸಾಧಿಸದ್ದು 'ನಿರ್ಮಲಾ ಸೀತಾರಾಮನ್​' ಸಾಧಿಸಿದ್ದಾರೆ..!

share with us

ನವದೆಹಲಿ: 01 ಜೂನ್ 2019 (ಫಿಕ್ರೋಖಬರ್ ಸುದ್ದಿ) ತಮಿಳುನಾಡಿನ ಮದುರೈನಲ್ಲಿ ಜನಿಸಿದ್ದ ನಿರ್ಮಲಾ ಸೀತಾರಾಮನ್​ ಅವರು ಲಂಡನ್​ ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಅಧ್ಯಯನ ಮಾಡಿ ಮೋದಿ ಸಂಪುಟದ ವಿತ್ತ ಸಚಿವರಾಗಿದ್ದು ತಮ್ಮ ಪ್ರತಿಭೆಯಿಂದ. 2008ರಲ್ಲಿ ಬಿಜೆಪಿ ಸೇರಿದ ಅವರು ನೋಡು ನೋಡುತ್ತಿದ್ದಂತೆ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೆಯಾದ ಛಾಪು ಮೂಡಿಸಿ ರಾಷ್ಟ್ರ ಕಾರ್ಯಕಾರಿಣಿ ಸದಸ್ಯೆಯಾದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಅವರು ಪಕ್ಷದ ವಕ್ತಾರರಾಗಿ ಸೇವೆ ಸಲ್ಲಿಸಿದರು. ರಕ್ಷಣಾ ಖಾತೆ ವಹಿಸಿಕೊಳ್ಳುವ ಮೊದಲು ಸ್ವತಂತ್ರ ಖಾತೆಯ ರಾಜ್ಯ ಸಚಿವರಾಗಿದ್ದರು. ಕರ್ನಾಟಕದಿಂದ ರಾಜ್ಯ ಸಭೆ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್ ಅವರು, 2017ರಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. 1970-71ರಲ್ಲಿ ಇಂದಿರಾ ಗಾಂಧಿ ಬಳಿಕ ರಕ್ಷಣಾ ಖಾತೆ ನಿಭಾಯಿಸಿದ ಮೊದಲ ಮಹಿಳೆ ಎನ್ನುವ ಖ್ಯಾತಿ ಪಡೆದಿದ್ದರು. ಹಣಕಾಸು ಸಚಿವ ಸ್ಥಾನದ ಹೊಣೆ ಹೊತ್ತ ದೇಶದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಆದರೆ, ಇಂದಿರಾ ಗಾಂಧಿ ಇವುಗಳ ಜವಾಬ್ದಾರಿ ಹೊತ್ತಿದ್ದು ತಾತ್ಕಾಲಿಕ ಮಾತ್ರ. ಆದರೆ, ಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗಿಲ್ಲ. ಈ ಸಾಧನೆಯನ್ನು ನಿರ್ಮಲಾ ಸೀತಾರಾಮನ್ ಅವರು ಮಾಡಿದ್ದಾರೆ. ಜವಹಾರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ ಸೀತಾರಾಮನ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಅಧ್ಯಯನ ಮಾಡಿದ್ದಾರೆ. ಸ್ವಲ್ಪ ಕಾಲ ಬ್ರಿಟನ್​ನ ಬಿಬಿಸಿಯಲ್ಲಿ ಸೇವೆ ಸಲ್ಲಿಸಿದ ಬಳಿಕ ಭಾರತಕ್ಕೆ ಮರಳಿದ ನಿರ್ಮಲಾ, ಹೈದರಾಬಾದ್​ನಲ್ಲಿ ಸೆಂಟರ್ ಆಫ್ ಪಬ್ಲಿಕ್​ ಪಾಲಿಸ್ ಸ್ಟಡೀಸ್​ ಸಂಸ್ಥೆಯಲ್ಲಿ ಉಪ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದರು

ಸೀತಾರಾಮನ್ ಅವರ ಜೀವನದ ಪ್ರಮುಖ ಘಟನೆಗಳು
* ತಿರುಚುನಾಪಳಿಯ ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಿಂದ ಪದವಿ 
* ಜವಹಾರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ 'ಇಂಡೋ- ಯುರೋಪಿಯನ್​ ಟೆಕ್ಸ್​ಟೈಲ್ ಟ್ರೇಡ್​'ನಲ್ಲಿ ಪಿ.ಎಚ್​ಡಿ
* 2003-2005ರ ಅವಧಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಸೇವೆ
* 2008ರಲ್ಲಿ ಬಿಜೆಪಿ ಸೇರ್ಪಡೆ, 2010ರಲ್ಲಿ ಪಕ್ಷದ ವಕ್ತಾರ ಹುದ್ದೆ
* 2014ರಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಯ ಸ್ವತಂತ್ರ ಸಚಿವೆ
* ಡಾ. ಪರಕಲ ಪ್ರಭಾಕರ್​ನೊಂದಿಗೆ ವಿವಾಹ, ಓರ್ವ ಪುತ್ರಿ
* ಲಂಡನ್​ನ ಅಗ್ರಿಕಲ್ಚರ್​ ಎಂಜಿನಿಯರ್ ಅಸೋಸಿಯೇಷನ್​ಲ್ಲಿ ಹಿರಿಯ ವ್ಯವಸ್ಥಾಪಕಿಯಾಗಿ ಕೆಲಸ

ನಿರ್ಮಲಾ ಸೀತಾರಾಮನ್​ (60)
ಬಿಜೆಪಿ ರಾಜ್ಯ ಸಭೆ ಸದಸ್ಯೆ (ಕರ್ನಾಟಕದಿಂದ ಆಯ್ಕೆ), ವಿತ್ತ ಸಚಿವೆ
ರಾಜ್ಯ: ತಮಿಳುನಾಡು (ಮದುರೈ)
ಪತಿ: ಡಾ. ಪರಕಲ ಪ್ರಭಾಕರ್​

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا