Urdu   /   English   /   Nawayathi

ಸೈಬರ್ ಫ್ರಾಡ್: ಡೇಟಿಂಗ್ ವೆಬ್ ಸೈಟ್ ನಿಂದ 14 ಲಕ್ಷ ರೂ. ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ!

share with us

ಹೈದ್ರಾಬಾದ್: 01 ಜೂನ್ 2019 (ಫಿಕ್ರೋಖಬರ್ ಸುದ್ದಿ) ಆನ್ ಲೈನ್ ನಲ್ಲಿ ಲೈಂಗಿಕತೆಗೆ ಸಂಬಂಧಿಸಿದಂತೆ ವಿವಿಧ ಜಾಹೀರಾತುಗಳನ್ನು ನೋಡಿ ಜನರನ್ನು ಮೋಸ ಮಾಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ. ಇದೇ ರೀತಿಯಲ್ಲಿ ಡೇಟಿಂಗ್ ವೆಬ್ ಸೈಟ್ ನಿಂದ ಮಾನ್ಸೂರಾಬಾದಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ 14 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ವಿವಿಧ ಸೇವೆಗಳನ್ನು ನೀಡುವ ನೆಪದಲ್ಲಿ  ಡೇಟಿಂಗ್ ವೆಬ್ ಸೈಟ್ ನಿರ್ವಹಿಸುತ್ತಿರುವವರು ಈ ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ಹಣ ಸಂಗ್ರಹಿಸಿದ್ದಾರೆ. ನಂತರ ಆತ ವಂಚನೆಗೊಳಗಾಗಿರುವುದು ಗೊತ್ತಾದ ನಂತರ ರಾಚಾಕೊಂಡಾ ಠಾಣೆಗೆ ದೂರು ಸಲ್ಲಿಸಿದ್ದಾರೆ. 22 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಒಂದು ತಿಂಗಳ ಹಿಂದೆ ಡೇಟಿಂಗ್ ವೆಬ್ ಸೈಟ್ ನಲ್ಲಿ ಎಸ್ಕಾರ್ಟ್ ಸರ್ವೀಸ್  ಜಾಹೀರಾತು ನೋಡಿ ಆಕರ್ಷಿತಗೊಂಡಿದ್ದು,  ಲೈಂಗಿಕ ಸೇವೆ ಪಡೆಯಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ನಂತರ ನೋಂದಣಿಯ ನೆಪದಲ್ಲಿ ಮೊದಲು ಸ್ವಲ್ಪ ಹಣ ಕಟ್ಟಿಸಿಕೊಳ್ಳಲಾಗಿದೆ. ತದನಂತರ ವಿವಿಧ ರೀತಿಯ ಸುಳ್ಳುಗಳನ್ನು ಹೇಳಿ  ಸುಮಾರು 14 ಲಕ್ಷ ರೂಪಾಯಿ ಪೀಕಿರುವುದಾಗಿ ಆತ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

ಕ, ಪ್ರ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا