Urdu   /   English   /   Nawayathi

ಸಾಕ್ಸ್ ನಲ್ಲಿ 10 ಲಕ್ಷ ವೌಲ್ಯದ ಚಿನ್ನದ ಪೇಸ್ಟ್ ಸಾಗಿಸುತ್ತಿದ್ದ ಖದೀಮ ಅಂದರ್​

share with us

ಮಂಗಳೂರು: 30 ಮೇ 2019 (ಫಿಕ್ರೋಖಬರ್ ಸುದ್ದಿ) ಸುಮಾರು 10 ಲಕ್ಷ ರೂ‌ಪಾಯಿ ಮೌಲ್ಯದ ಚಿನ್ನದ ಪೇಸ್ಟ್​​ನ್ನು ಶೂ ಸಾಕ್ಸ್​​ನಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ ಚಾಲಾಕಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​​ ಅಧಿಕಾರಿಗಳು ಬಂಧಿಸಿದ್ದಾರೆ. ದುಬೈನಿಂದ ಬಂದ ಪ್ರಯಾಣಿಕನು ಸಾಕ್ಸ್​​​ನಲ್ಲಿ ಅಡಗಿಸಿಟ್ಟು 10.84 ಲಕ್ಷ ರೂಪಾಯಿ ವೌಲ್ಯದ 333.84 ಗ್ರಾಂ ತೂಕದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ಪ್ರಯಾಣಿಕ ತಾನು ಧರಿಸಿದ್ದ ಸಾಕ್ಸ್‌ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸಿದ್ದ. ಮೇ 28ರಂದು ದುಬೈನಿಂದ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ ಈ ಪ್ರಯಾಣಿಕ ಬಂದಿದ್ದು, ಸಂಶಯದಿಂದ ತಪಾಸಣೆಗೆ ಒಳಪಡಿಸಿದಾಗ ಆತ ಧರಿಸಿದ್ದ ಸಾಕ್ಸ್‌ನಲ್ಲಿ ಚಿನ್ನ ಪತ್ತೆಯಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا