Urdu   /   English   /   Nawayathi

ನಿಂತ ಲಾರಿಗೆ ಖಾಸಗಿ ಬಸ್ ಡಿಕ್ಕಿ: ಮೂವರು ಸಾವು, ಮದುವೆ ಗಂಡಿಗೆ ಗಾಯ

share with us

ಕರ್ನೂಲ್(ಆಂಧ್ರಪ್ರದೇಶ)​: 30 ಮೇ 2019 (ಫಿಕ್ರೋಖಬರ್ ಸುದ್ದಿ) ಮದುವೆ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದ ಖಾಸಗಿ ಬಸ್,​ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಮದುವೆ ಗಂಡು ಗಾಯಗೊಂಡ ಘಟನೆ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್​ ಬಳಿಯ ಉಲಿಂದಕೊಂಡ ಹೈವೇಯಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಎಸ್​ಆರ್​ಎಸ್​ ಟ್ರಾವೆಲ್ಸ್​ ಬಸ್​ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್​ ಡ್ರೈವರ್​ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬಸ್​ ಜಖಂಗೊಂಡಿದೆ. ಲಾರಿಯಲ್ಲಿದ್ದ ಪೈಪ್​ಗಳು ಬಸ್​ನೊಳಗೆ ನುಗ್ಗಿದ್ದು, ಗಾಯಾಳುಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಸ್‌ನಲ್ಲಿ ಮಧುಮಗ ಸೇರಿದಂತೆ 15 ಜನರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಇದೆ. ಅಪಘಾತದಲ್ಲಿ ಮದುವೆ ಗಂಡು ಸೇರಿದಂತೆ ಐವರು ಗಾಯಗೊಂಡಿದ್ದು, ಗಾಯಾಳುಗಳನ್ನು ಕರ್ನೂಲ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا