Urdu   /   English   /   Nawayathi

ಎಟಿಎಂಗೆ ನುಗ್ಗಿ ಮಷಿನ್​ ಕಟ್​ ಮಾಡಿದ ಖದೀಮರು...ಮುಂದೇನಾಯ್ತು?

share with us

ಕಲಬುರಗಿ: 29 ಮೇ 2019 (ಫಿಕ್ರೋಖಬರ್ ಸುದ್ದಿ) ಎಟಿಎಂ ಕಳ್ಳತನ ಮಾಡಲು ಹೋಗಿ ಅದು ವಿಫಲವಾಗಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ಆ್ಯಕ್ಸಿಸ್​​ ಬ್ಯಾಂಕ್ ಎಟಿಎಂ ಮಷಿನ್​ ತುಂಡು ಮಾಡಿ, ಹಣ ದೋಚಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಆದರೆ, ಎಟಿಎಂ ಪೂರ್ಣವಾಗಿ ಕತ್ತರಿಸಲಾಗದೇ ವಿಫಲಗೊಂಡು ಸ್ಥಳದಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ವೇಳೆ, ಸಿಸಿ ಕ್ಯಾಮೆರಾಕ್ಕೂ ಡ್ಯಾಮೇಜ್ ಮಾಡಿದ್ದು, ಮೂರ್ನಾಲ್ಕು ಜನರಿದ್ದ ಗುಂಪಿನಿಂದ ಈ ಕಳ್ಳತನಕ್ಕೆ ಯತ್ನ ನಡೆದಿದೆ ಎನ್ನಲಾಗುತ್ತಿದೆ‌. ಸ್ಥಳಕ್ಕೆ ಪೋಲಿಸರು ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಶೋಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا