Urdu   /   English   /   Nawayathi

ಭಾರತ ನಮ್ಮ ಪರಮಾಪ್ತ ರಾಷ್ಟ್ರ, ಸೌಹಾರ್ದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ: ಅಮೆರಿಕ

share with us

ವಾಷಿಂಗ್ಟನ್: 29 ಮೇ 2019 (ಫಿಕ್ರೋಖಬರ್ ಸುದ್ದಿ) ಹಾಲಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೇರಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದೊಂದಿಗಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ ಈಬಗ್ಗೆ ಮಾತನಾಡಿರುವ ಅಮೆರಿಕ ಕಾರ್ಯದರ್ಶಿ ಮೈಕ್ ಪೊಂಪಿಯೋ ಅವರುಭಾರತದ ಸಾರ್ವತ್ರಿಕ ಚುನಾವಣೆ ಬಳಿಕ ಟ್ರಂಪ್ ಆಡಳಿತ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ  ಸೌಹಾರ್ಧ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಿದೆ. ಈ ಸಂಬಂಧ ಭಾರತದೊಂದಿಗಿನ ವಾಣಿಜ್ಯ ವಹಿವಾಟುಗಳು, ಒಪ್ಪಂದಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸಲು ಅಮೆರಿಕ ಉತ್ಸುಕವಾಗಿದೆ ಎಂದು ಹೇಳಿದ್ದಾರೆ. ವಿಶ್ವದ ಆರು ದೊಡ್ಡ ಆರ್ಥಿಕತೆಗಳಲ್ಲಿ ಭಾರತವೂ ಕೂಡ ಒಂದು. ಭಾರತ ಅಮೆರಿಕದ ಪರಮಾಪ್ತ ರಾಷ್ಟ್ರವಾಗಿದ್ದು, ಈ ಹಿಂದಿನಂತೆಯೇ ಭವಿಷ್ಯದಲ್ಲೂ ಕೂಡ ಉಭಯ ದೇಶಗಳ ಸೌಹಾರ್ಧ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ಅಂತೆಯೇ ಉಭಯ ದೇಶಗಳ ನಡುವಿನ ವಾಣಿಜ್ಯ ಸಹಕಾರ ಕೂಡ ವೃದ್ದಿಯಾಗಲಿದೆ. ಈ ಕುರಿತಂತೆ ಟ್ರಂಪ್ ಆಡಳಿತ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಮೈಕ್ ಪೊಂಪಿಯೋ ಹೇಳಿದ್ದಾರೆ. ಇನ್ನು ಇತ್ತ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಅತ್ತ ಸಭೆ ಸೇರಿದ್ದ ಟ್ರಂಪ್ ಆಡಳಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್ ಡಿಎ ಮೈತ್ರಿಕೂಟಕ್ಕೆ ಶುಭಾಶಯ ಕೋರಿದೆ. ಈ ಸಭೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಕಾರ್ಯದರ್ಶಿ ಮೈಕ್ ಪೊಂಪಿಯೋ ಸೇರಿದಂತೆ ಟ್ರಂಪ್ ಸರ್ಕಾರದ ಪ್ರಮುಖರು ಭಾಗವಹಿಸಿದ್ದರು.

Nikki Haley✔@NikkiHaley

India continues to have amazing potential and is a strong US partner. Congratulations to @narendramodi on your success with the elections and the direction you are taking India. We look forward to seeing our partnership continue to strengthen. 

2,611

1:27 AM - May 25, 2019

Twitter Ads info and privacy

453 people are talking about this

View image on Twitter

View image on Twitter

Secretary Pompeo✔@SecPompeo

Congratulations to @narendramodi and the NDA for their victory in India’s election, and to the Indian people for casting their votes in such historic numbers. As the world’s largest exercise in democracy, ’s election is an inspiration around the world.

4,619

12:15 AM - May 24, 2019

1,381 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا