Urdu   /   English   /   Nawayathi

3ನೇ ಮಗುವಿಗೆ ಮತದಾನ, ಸರ್ಕಾರಿ ಸೌಲಭ್ಯ ಕಟ್- ಜನಸಂಖ್ಯೆ ನಿಯಂತ್ರಣಕ್ಕೆ ಬಾಬಾ ರಾಮ್​ದೇವ್‌ ಪರಿಹಾರ

share with us

ಹರಿದ್ವಾರ: 27 ಮೇ 2019 (ಫಿಕ್ರೋಖಬರ್ ಸುದ್ದಿ) ಪತಂಜಲಿ ಯೋಗಪೀಠದ ಸಂಸ್ಥಾಪಕ ಬಾಬಾರಾಮ್​ದೇವ್ ಆಗಾಗ ತಮ್ಮ ಹೇಳಿಗೆಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಈಗ ದೇಶದ ಜನಸಂಖ್ಯಾಸ್ಪೋಟ ತಗ್ಗಿಸಲು ಕೆಲ ಸಲಹೆಗಳನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹರಿದ್ವಾರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ 50 ವರ್ಷಗಳಲ್ಲಿ ಭಾರತದ ಜನಸಂಖ್ಯೆ 150 ಕೋಟಿ ಗಡಿದಾಟದಂತೆ ನೋಡಿಕೊಳ್ಳಬೇಕಾದರೆ, ಸರ್ಕಾರ ಕೆಲ ನಿಯಮಗಳನ್ನ ಜಾರಿಗೆ ತರಬೇಕಿದೆ. ಪ್ರತಿ ಕುಟುಂಬದಲ್ಲಿ 3ನೇ ಮಗು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳು ಜನಿಸಿರೆ, ಆ ಮಕ್ಕಳಿಗೆ ಯಾವುದೇ ರೀತಿ ಸರ್ಕಾರಿ ಸೌಲಭ್ಯ, ನೌಕರಿ ನೀಡಬಾರದು. ಹಾಗೇ ಮತದಾನದ ಹಕ್ಕು, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಸಿದುಕೊಂಡ್ರೇ ಭಾರತದ ಜನಸಂಖ್ಯೆಯನ್ನು ನಿಯಂತ್ರಿಸಬಹುದು ಅಂತಾ ಬಾಬಾ ರಾಮದೇವ್‌ ಸಲಹೆ ನೀಡಿದ್ದಾರೆ. ಇದೇ ವೇಳೆ ಗೋವುಗಳ ರಕ್ಷಣೆಗಾಗಿ ಗೋಮಾಂಸ ರಫ್ತು ಮಾಡೋದನ್ನ ಸಂಪೂರ್ಣವಾಗಿ ನಿಷೇಧಿಸಬೇಕು. ಗೋವುಗಳ ಕಳ್ಳಸಾಗಣೆ ತಪ್ಪಿಸಿ ರಕ್ಷಿಸಬೇಕಿದೆ. ಆಗಲೇ ಹಿಂದುತ್ವ ಕಾಪಾಡಲು ಸಾಧ್ಯ. ಮಾಂಸ ಪ್ರಿಯರು ಪರ್ಯಾಯವಾಗಿ ಬೇರೆ ಪ್ರಾಣಿಯ ಮಾಂಸ ಬಳಸಬಹುದು ಎಂದು ತಿಳಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا