Urdu   /   English   /   Nawayathi

ಸಾಯುತ್ತೀನಿ ಅಂತ ಎದೆಗುಂದದೆ ನುಂಗಲು ಬಂದ ಹಾವನ್ನೇ ಕಚ್ಚಿ ತಿಂದ ಅಳಿಲು, ಫೋಟೋ ವೈರಲ್!

share with us

ವಾಷಿಂಗ್ಟನ್: 27 ಮೇ 2019 (ಫಿಕ್ರೋಖಬರ್ ಸುದ್ದಿ) ತನ್ನ ಪ್ರಾಣ ಹೋಗುತ್ತದೆ ಎಂದು ತಿಳಿದಾಗ ಎಂತಹ ಸೌಮ್ಯ ಸ್ವಭಾವದ ಪ್ರಾಣಿ ಸಹ ತಿರುಗಿ ಬಿಳುತ್ತದೆ. ಅದೇ ರೀತಿ ಹಣ್ಣು, ಎಲೆಗಳನ್ನು ತಿಂದು ಬದುಕುವ ಅಳಿಲುವೊಂದು ತನ್ನನ್ನು ನುಂಗಲು ಬಂದ ಹಾವನ್ನೇ ಕಚ್ಚಿ ಕಚ್ಚಿ ತಿಂದಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಡಾಲ್ಪೆ ಶಿಖರದ ನ್ಯಾಷನಲ್ ಪಾರ್ಕ್ನಲ್ಲಿ ಅಳಿಲು ಹಾವನ್ನು ಕಚ್ಚಿ ತಿಂದಿದ್ದು ಈ ಫೋಟೋವನ್ನು ಅಮೆರಿಕದ ನ್ಯಾಷನಲ್ ಪಾರ್ಕ್ ಸರ್ವಿಸ್ ತನ್ನ ಅಧಿಕೃತ ಫೇಸ್ ಬುಕ್ನಲ್ಲಿ ಅಪ್ಲೋಡ್ ಮಾಡಿದೆ. ಇನ್ನು ಫೋಟೋ ಕುರಿತಂತೆ ಹಫಿಂಗ್ಟನ್ ಪೋಸ್ಟ್ ಈ ಫೋಟೋ ಹತ್ತು ವರ್ಷಗಳ ಹಳೆಯದು. 2009ರಲ್ಲಿ ಉದ್ಯಾನದ ರೇಂಜರ್ ವಿಲಿಯಂ ಲೆಗೆಟ್ ಈ ಫೋಟೋವನ್ನು ಸೆರೆ ಹಿಡಿದಿದ್ದರು. ಆದರೆ ಇದೀಗ ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಬರೆದುಕೊಂಡಿದೆ.

ಕ, ಪ್ರ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا