Urdu   /   English   /   Nawayathi

ಗಾಂಧಿ ಕುಟುಂಬದವರೇ ಕಾಂಗ್ರೆಸ್​ ಅಧ್ಯಕ್ಷರಾಗಬೇಕಿಲ್ಲ: ರಾಹುಲ್ ಹೀಗೆ ಹೇಳಿದ್ದೇಕೆ?

share with us

ನವದೆಹಲಿ: 26 ಮೇ 2019 (ಫಿಕ್ರೋಖಬರ್ ಸುದ್ದಿ) ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾಗಿದ್ದುಕೊಂಡೂ ಕಾಂಗ್ರೆಸ್​ ಹೀನಾಯ ಸೋಲು ಕಂಡಿದ್ದರಿಂದ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ಬೇಸರಕ್ಕೊಳಗಾಗಿದ್ದಾರೆ. ಕಾಂಗ್ರೆಸ್​ ಕಾರ್ಯಕಾರಣಿ ಸಭೆಯಲ್ಲಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ರಾಹುಲ್​ರ ಮನವೊಲಿಸಿರುವ ಹಿರಿಯ ನಾಯಕರು, ಅಧ್ಯಕ್ಷರಾಗಿ ಮುಂದುವರೆಯುವಂತೆ ತಿಳಿಸಿದ್ದಾರೆ. ತನ್ನ ಬದಲು ಪ್ರಿಯಾಂಕಾ ಈ ಜವಾಬ್ದಾರಿ ನಿರ್ವಹಿಸುವಕ್ಕೆ ರಾಹುಲ್​ ಬೇಡ ಎಂದರು ಎಂದು ಮೂಲಗಳು ತಿಳಿಸಿವೆ. ಸಭೆ ವೇಳೆ ಮಾತನಾಡಿದ ರಾಹುಲ್​, ಕಾಂಗ್ರೆಸ್​ ಪಕ್ಷದ ಓರ್ವ ಶಿಸ್ತಿನ ಸಿಪಾಯಿಯಾಗಿ ನಾನು ನಿರ್ಭಯದಿಂದ ಹೋರಾಟ ಮುಂದುವರೆಸುತ್ತೇನೆ. ಆದರೆ, ಪಕ್ಷದ ಅಧ್ಯಕ್ಷನಾಗಿ ಮುಂದುವರೆಯಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು. ರಾಹುಲ್​ರ ಈ ನಿರ್ಧಾರ ಪಕ್ಷದ ನಾಯಕರಿಗೆ ಶಾಕ್​ ನೀಡಿತ್ತು. ಈ ವೇಳೆ, ಅಧ್ಯಕ್ಷಗಿರಿಗೆ ಪ್ರಿಯಾಂಕಾರ ಹೆಸರು ಕೇಳಿಬಂದಾಗ ರಾಹುಲ್​, ನನ್ನ ಸಹೋದರಿಯನ್ನು ಇದಕ್ಕೆಲ್ಲಾ ಎಳೆಯಬೇಡಿ ಎಂದು ಹೇಳಿದ್ದಾರೆ . ಕಾಂಗ್ರೆಸ್​ ಅಧ್ಯಕ್ಷ ಸ್ಥಾನವನ್ನು ಗಾಂಧಿ ಕುಟುಂಬದವರೇ ನಿಭಾಯಿಸಬೇಕೆಂದೇನೂ ಇಲ್ಲ ಎಂದೂ ತಿಳಿಸಿದ್ದಾರೆ. ಸೋನಿಯಾ ಹಾಗೂ ಪ್ರಿಯಾಂಕಾ ಸೇರಿ ರಾಹುಲ್​ರ ಮನವೊಲಿಸಲು ಯತ್ನಿಸಿದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಆದರೆ ಪಕ್ಷದ ಹಿರಿಯ ನಾಯಕರೆಲ್ಲರೂ ಕಿವಿಮಾತು ಹೇಳಿದಾಗ ರಾಹುಲ್ ಒಪ್ಪಿಕೊಂಡರು ಎನ್ನಲಾಗಿದೆ. ಆನಂತರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೇವಾಲ, ರಾಹುಲ್​ರ ರಾಜೀನಾಮೆಯನ್ನು ಪಕ್ಷವು ತಿರಸ್ಕರಿಸಿದೆ ಎಂದು ಮಾಹಿತಿ ನೀಡಿದರು.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا