Urdu   /   English   /   Nawayathi

ಎಟಿಎಂನಲ್ಲಿ ಭಾರಿ ಅಗ್ನಿ ಅವಘಡ: ಅಲ್ಲಿದ್ದ ಹಣದ ಸ್ಥಿತಿ ಏನಾಯ್ತು ಗೊತ್ತಾ?

share with us

ಬೀದರ್​: 25 ಮೇ 2019 (ಫಿಕ್ರೋಖಬರ್ ಸುದ್ದಿ) ನಗರದ ಎಟಿಎಂ ವೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ನೋಡು ನೋಡುತ್ತಲೇ ಕೊಠಡಿಯಲ್ಲಿ ಬೆಂಕಿ ಆವರಿಸಿಕೊಂಡು ಎಟಿಎಂ ಹೊತ್ತಿ ಉರಿದಿದೆ. ನೌಬಾದ್​ ಗ್ರಾಮದ ಭಾಲ್ಕಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್​​ನಲ್ಲಿ ಈ ಅಗ್ನಿ ದುರಂತ ನಡೆದಿದ್ದು, ಮೊದ ಮೊದಲು ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಇಡೀ ಎಟಿಎಂ ಕೇಂದ್ರವನ್ನೇ ನುಂಗಿಹಾಕಿದೆ. ಉರಿಯುತ್ತಿರುವ ಬೆಂಕಿಯನ್ನು ಕಂಡ ಸ್ಥಳೀಯರು ತಕ್ಷಣ ಅಗ್ನಿ ಶಾಮಕದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಎಟಿಎಂ ಸುಟ್ಟು ಕರಕಲಾಗಿದೆ. ವಿದ್ಯುತ್​​ ಶಾರ್ಟ್ ಸರ್ಕ್ಯೂಟ್​ನಿಂದ ಈ ಅವಘಡ ನಡೆದಿದೆ ಎನ್ನಲಾಗಿದ್ದು ಎಟಿಎಂನಲ್ಲಿದ್ದ ನಗದು ಹಣದ ಸ್ಥಿತಿ ಏನಾಗಿದೆ? ಎಷ್ಟು ಹಣ ಇತ್ತು ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا